×
Ad

ಲಖಿಂಪುರ ಹಿಂಸಾಚಾರ ಪ್ರಕರಣ:ಆಶಿಶ್ ಮಿಶ್ರಾ ಶೀಘ್ರ ಬಂಧನ ಸಾಧ್ಯತೆ: ವರದಿ

Update: 2021-10-09 21:35 IST
photo: ANI

ಲಕ್ನೊ: ಲಖಿಂಪುರ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಹಾಗೂ  ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾನನ್ನು ಸುದೀರ್ಘ ವಿಚಾರಣೆಯ ನಂತರ ಜಿಲ್ಲಾ ಪೊಲೀಸರು ಶೀಘ್ರವೇ ಬಂಧಿಸುವ ಸಾಧ್ಯತೆಯಿದೆ ಎಂದು The new Indian express ವರದಿ ಮಾಡಿದೆ.

 ಡಿಐಜಿ ಉಪೇಂದ್ರ ಅಗರ್‌ವಾಲ್ ನೇತೃತ್ವದ ಅಪರಾಧ ವಿಭಾಗದ ವಿಶೇಷ ತನಿಖಾ ತಂಡ (ಎಸ್‌ಐಟಿ) ಶನಿವಾರ ಲಖಿಂಪುರದಲ್ಲಿ ಮಿಶ್ರಾನನ್ನು ವಿಚಾರಣೆಗೆ ಒಳಪಡಿಸಿತ್ತು.

ವಿಚಾರಣೆಯ ನಂತರ ಆಶಿಶ್ ಮಿಶ್ರಾ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಐಪಿಸಿಯ ಇನ್ನೂ ಕೆಲವು ಸೆಕ್ಷನ್ ಗಳನ್ನು ಸೇರಿಸಲು ಜಿಲ್ಲಾ ಪೊಲೀಸರಿಗೆ ಎಸ್‌ಐಟಿ ಶಿಫಾರಸು ಮಾಡಿದೆ ಎಂದು ಮೂಲಗಳು ಹೇಳಿವೆ.

ಆಶಿಶ್ ಮಿಶ್ರಾ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ತನಿಖೆಗಾಗಿ ಉತ್ತರ ಪ್ರದೇಶ ಪೊಲೀಸರು ರಚಿಸಿದ ಅಪರಾಧ ವಿಭಾಗದ ವಿಶೇಷ ತನಿಖಾ ತಂಡದ(ಸಿಟ್) ಮುಂದೆ ಶನಿವಾರ ಬೆಳಿಗ್ಗೆ 10: 40 ರ ಸುಮಾರಿಗೆ ಹಾಜರಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News