ಅಲ್ಅಖ್ಸಾ ಮಸೀದಿಯಲ್ಲಿ ಯೆಹೂದಿ ಪ್ರಾರ್ಥನೆ ನಿಷೇಧವನ್ನು ಎತ್ತಿಹಿಡಿದ ಇಸ್ರೇಲ್ ನ್ಯಾಯಾಲಯ

Update: 2021-10-09 17:30 GMT
photo : twitter/@m7mdkurd

ಜೆರುಸಲೇಂ, ಅ.9: ಜೆರುಸಲೇಂನ ಅಲ್ಅಖ್ಸಾ ಮಸೀದಿಯ ಆವರಣದಲ್ಲಿ ಯೆಹೂದಿಗಳ ಪ್ರಾರ್ಥನೆಗೆ ವಿಧಿಸಿದ್ದ ನಿಷೇಧವನ್ನು ಇಸ್ರೇಲ್ ನ ನ್ಯಾಯಾಲಯ ಎತ್ತಿಹಿಡಿದಿದ್ದು, ಪ್ರಾರ್ಥನೆಗೆ ಅವಕಾಶ ನೀಡಿದ್ದ ಕೆಳ ನ್ಯಾಯಾಲಯದ ಆದೇಶವನ್ನು ವಜಾಗೊಳಿಸಿದೆ. ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದ ಇಸ್ರೇಲ್ನ ಬೋಧಕ ಆರ್ಯೆಹ್ ಲಿಪೊ ಎಂಬವರಿಗೆ 2 ವಾರದ ನಿಷೇಧ ವಿಧಿಸಲಾಗಿತ್ತು. 

ಇದನ್ನು ಪ್ರಶ್ನಿಸಿ ಅವರು ಜೆರುಸಲೇಂನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಲಿಪೊ ತಮ್ಮಷ್ಟಕ್ಕೆ ಮೆಲುಧ್ವನಿಯಲ್ಲಿ ನಡೆಸುವ ಪ್ರಾರ್ಥನೆ ಪೊಲೀಸರ ಸೂಚನೆಯನ್ನು ಉಲ್ಲಂಘಿಸುವುದಿಲ್ಲ. ಆದ್ದರಿಂದ ಅವರಿಗೆ ವಿಧಿಸಿದ್ದ ನಿಷೇಧ ಸರಿಯಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ಇದನ್ನು ಪೆಲೆಸ್ತೀನಿಯರು, ಜೋರ್ಡನ್, ಈಜಿಪ್ಟ್, ಸೌದಿ ಅರೆಬಿಯಾದ ಅಧಿಕಾರಿಗಳು ಖಂಡಿಸಿದ್ದರು. ಇದನ್ನು ಪ್ರಶ್ನಿಸಿ ಇಸ್ರೇಲ್ ಪೊಲೀಸರು ಜೆರುಸಲೇಂ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಯೆಹೂದಿಗಳು ಈ ಸ್ಥಳಕ್ಕೆ ಭೇಟಿ ನೀಡಬಹುದು, ಆದರೆ ಪ್ರಾರ್ಥನೆ ಸಲ್ಲಿಸುವಂತಿಲ್ಲ ಎಂಬ ಆದೇಶವನ್ನು ಎತ್ತಿಹಿಡಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News