'ಓವರ್‍ಸೀಸ್ ಎಂಪ್ಲಾಯ್ಮೆಂಟ್ ಫಾರ್ ಇಂಡಿಯನ್ ನರ್ಸಸ್ ಇನ್ ಇಟಲಿ' ವೆಬಿನಾರ್

Update: 2021-10-11 12:49 GMT

ವಿ-ಎಂಪೈರ್ ಓವರ್‍ಸೀಸ್ ಕನ್ಸಲ್ಟೆನ್ಸಿ ಸಂಸ್ಥೆಯು ಬೆಂಗಳೂರಿನ ಆರ್‍ವಿ ಕಾಲೇಜ್ ಆಫ್ ಇಂಜಿನಿಯರಿಂಗ್ ಸಹಯೋಗ ದೊಂದಿಗೆ  ಅ. 9ರಂದು ''ಓವರ್‍ಸೀಸ್ ಎಂಪ್ಲಾಯ್ಮೆಂಟ್ ಫಾರ್ ಇಂಡಿಯನ್ ನರ್ಸಸ್ ಇನ್ ಇಟಲಿ'' (ಭಾರತೀಯ ದಾದಿಯರಿಗೆ ಇಟಲಿಯಲ್ಲಿ ಸಾಗರೋತ್ತರ ಉದ್ಯೋಗಗಳು) ಎಂಬ ವಿಷಯದ ಮೇಲೆ ವೆಬಿನಾರ್ ಏರ್ಪಡಿಸಿತ್ತು.

ವೆಬಿನಾರ್ ಅನ್ನು ವಿ-ಎಂಪೈರ್ ಓವರ್‍ಸೀಸ್ ಕನ್ಸಲ್ಟೆನ್ಸಿ, ಟೊರಿನೊ, ಇಟಲಿ ಇದರ ಸಿಇಒ ಹೇಮೇಗೌಡ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಇಟಲಿಯ ಮಿಲಾನೋದಲ್ಲಿರುವ ಭಾರತೀಯ ಕಾನ್ಸುಲೇಟ್‍ನ ಕಾನ್ಸುಲ್ ಜನರಲ್ ಟಿ ಅಜುಂಗ್ಲ ಝಮೀರ್ ಮಾತನಾಡಿ ದಾದಿಯರ ವೃತ್ತಿ ಜಗತ್ತಿನಲ್ಲಿ ಅತ್ಯಂತ ನಿಸ್ಸ್ವಾರ್ಥ ಸೇವೆ ಸಲ್ಲಿಸುವ ವೃತ್ತಿಯಾಗಿದೆ. ದಾದಿಯರು ಜಗತ್ತಿನಾದ್ಯಂತ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಸಲ್ಲಿಸುವ ಸೇವೆಗೆ ಎಲ್ಲರೂ ಋಣಿಯಾಗಬೇಕಿದೆ'' ಎಂದು ಹೇಳಿದರಲ್ಲದೆ ''ಇಂಡಿಯನ್ ನರ್ಸಸ್ ಟು ಇಟಲಿ' ಯೋಜನೆಗೆ ಚಾಲನೆ ನೀಡಿದರು.

ಇನ್ನೋರ್ವ ಮುಖ್ಯ ಅತಿಥಿ, ಕರ್ನಾಟಕದ ಉನ್ನತ ಶಿಕ್ಷಣ ಸಚಿವ ಡಾ ಸಿಎನ್ ಅಶ್ವಥ ನಾರಾಯಣ್ ಅವರು ಮಾತನಾಡಿ,  ಭಾರತದಲ್ಲಿ ನರ್ಸಿಂಗ್ ಶಿಕ್ಷಣ ಪಡೆದವರಲ್ಲಿ ಹಲವರು  ವಿದೇಶಗಳಲ್ಲಿ ಸೇವೆ ಸಲ್ಲಿಸುವ ಇಂಗಿತವನ್ನು ಆರ್ಥಿಕ ಕಾರಣಗಳಿಗಾಗಿ ಹಾಗೂ ಹೆಚ್ಚಿನ ಕಲಿಕೆಗಾಗಿ  ಹೊಂದಿರುತ್ತಾರೆ. ಯುರೋಪ್ ಖಂಡದಲ್ಲಿ ಹಲವು ಭಾಷೆಗಳಿವೆ, ಭಾರತೀಯ ದಾದಿಯರಿಗೂ ಹಲವು ಭಾಷೆಗಳಲ್ಲಿ ತರಬೇತಿ ನೀಡಲು ಪ್ರಯತ್ನಿಸಲಾಗುವುದು'' ಎಂದು ಹೇಳಿದರು. ವಿ-ಎಂಪೈರ್ ಕನ್ಸಲ್ಟೆನ್ಸಿಯ ವೆಬ್‍ಸೈಟ್ ಅನ್ನೂ ಈ ಸಂದರ್ಭ ಸಚಿವರು ಉದ್ಘಾಟಿಸಿದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಉಪಕುಲಪತಿ ಡಾ ಜಯಕರ್ ಎಸ್ ಎಂ.  ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ ಬೇಳೂರು ರಾಘವೇಂದ್ರ ಶೆಟ್ಟಿ,  ಭಾರತೀಯ ನರ್ಸಿಂಗ್ ಮಂಡಳಿ ಅಧ್ಯಕ್ಷ ಡಾ ಟಿ ದಿಲೀಪ್ ಕುಮಾರ್, ಆರ್‍ವಿ ವಿಶ್ವವಿದ್ಯಾಲಯ, ಬೆಂಗಳೂರು ಇದರ ಉಪಕುಲಪತಿ ಡಾ. ವೈ ಎಸ್ ಆರ್ ಮೂರ್ತಿ, ಟ್ರೈನ್ಡ್ ನರ್ಸಸ್ ಅಸೋಸಿಯೇಶನ್ ಆಫ್ ಇಂಡಿಯಾ ಇದರ ಅಧ್ಯಕ್ಷ ಡಾ. ರಾಯ್ ಕೆ ಜಾರ್ಜ್, ಸಂಸ್ಥೆಯ ಕರ್ನಾಟಕ ಘಟಕ ಅಧ್ಯಕ್ಷ ಡಾ. ಎಟಿಎಸ್ ಗಿರಿ ಮುಂತಾದವರು ವೆಬಿನಾರ್ ನಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News