ಉಳ್ಳಾಲ: 'ರಬೀಹ್ ಮೊಹಬ್ಬತ್' ಮಾಸಾಚಾರಣೆ
ಉಳ್ಳಾಲ: ಪ್ರವಾದಿ ಮುಹಮ್ಮದ್ (ಸ.ಅ )ರ ಜೀವನವು ಮನುಷ್ಯ ಬದುಕಿಗೆ ಮಾದರಿಯಾಗಿವೆ. ಮಾನವೀಯತೆ, ಸಹಿಷ್ಣುತೆ ಮತ್ತು ಸಹಬಾಳ್ವೆಗೆ ಪೂರಕವಾದ ಪ್ರವಾದಿಯವರ ಜೀವನವನ್ನು ಅನುಸರಣಿಸುವ ಮೂಲಕ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಕೇಂದ್ರ ಮುಶಾವರ ಸಮಿತಿ ಸದಸ್ಯ ಶೈಖುನಾ ಬಂಬ್ರಾಣ ಉಸ್ತಾದ್ ಹೇಳಿದರು.
ಅವರು ಉಳ್ಳಾಲ ವಲಯ ಎಸ್ ವೈ ಎಸ್ ಕಚೇರಿಯಲ್ಲಿ ನಡೆದ ಜಿಲ್ಲಾ ಎಸ್ ವೈ ಎಸ್ ನೇತೃತ್ವದ 'ರಬೀಹ್ ಮೊಹಬ್ಬತ್' ಮಾಸಾಚಾರಣೆಯ ಮೊದಲ ಸಭೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.
ಸಭೆಯ ಅಧ್ಯಕ್ಷತೆ ವಹಿಸಿದ ದ.ಕ.ಜಿಲ್ಲಾ ಎಸ್.ವೊಯಿ.ಎಸ್ .ನ ಜಿಲ್ಲಾಧ್ಯಕ್ಷ ಮೌಲಾನ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ವಹಿಸಿದ್ದರು. ಶೈಖುನಾ ಉಸ್ಮಾನ್ ಫೈಝಿ, ಉಮರ್ ದಾರಿಮಿ, ಮೇಲಂಗಡಿ ಹೊಸಪಳ್ಳಿಯ ಇಮಾಮ್ ಅಶ್ರಫ್ ಫೈಝಿ ಮಾತನಾಡಿದರು. ಫಾರೂಕ್ ಉಳ್ಳಾಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಝೀರ್ ಉಳ್ಳಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಖತೀಬ್ ಅನ್ವರ್ ಅಲಿ ದಾರಿಮಿ, ಮೇಲಂಗಡಿ ಹೊಸಪಳ್ಳಿ ಜುಮಾ ಮಸೀದಿಯ ಅಧ್ಯಕ್ಷ ಮುಸ್ತಫ ಅಬ್ದಲ್ಲ, ಎಸ್ ವೈ.ಎಸ್ ಉಳ್ಳಾಲ ಘಟಕ ಅಧ್ಯಕ್ಷ ಕೆ.ಎಸ್ ಮೊಹ್ದಿನ್, ಉಳ್ಳಾಲ ಶಂಶುಲು ಉಲೇಮಾ ಚಾರಿಟೇಬಲ್ ಅಧ್ಯಕ್ಷ ಯುಟಿ.ಮುಹಮ್ಮದ್ ಹಾಜಿ, ಮುಸತಫ ಫೈಝಿ ಉಸ್ತಾದ್, ಸಿತಾರ್ ಮಜೀದ್ ಹಾಜಿ ಸುಳ್ಯ, ಉಳ್ಳಾಲ ಸಮಸ್ತ ಮುಖಂಡರುಗಳಾದ ಯು.ಸಿ. ಇಬ್ರಾಹಿಂ ಹಾಜಿ, ಜಮಾಲ್ ಬಾರ್ಲಿ, ರಝಾಕ್ ಹರೇಕಳ, ಬಶೀರ್ ಇಸ್ಮಾಯಿಲ್, ಕೌನ್ಸಿಲರ್ ಜಬ್ಬಾರ್, ಅಶ್ರಫ್ ಮೇಲಂಗಡಿ, ಸೈಯ್ಯದ್ ಇಬ್ರಾಹಿಂ ತಂಙಳ್, ಅಶ್ರಫ್ ಮುಕ್ಕಚೇರಿ ಮತ್ತಿತರರು ಭಾಗವಹಿಸಿದ್ದರು.