×
Ad

ಉಡುಪಿ ಜಿಲ್ಲೆಯಲ್ಲಿ ಲಸಿಕೆ ಲಭ್ಯತೆ ವಿವರ

Update: 2021-10-11 20:59 IST

ಉಡುಪಿ, ಅ.11: ನವರಾತ್ರಿ ಪ್ರಯುಕ್ತ ಅ.14ರವರೆಗೆ ಉಡುಪಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಕೋವಿಡ್-19 ಲಸಿಕಾ ಅಭಿಯಾನದಲ್ಲಿ ಜಿಲ್ಲೆಯ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಇಂದೂ 18 ವರ್ಷ ಮೇಲಿನವರಿಗೆ ಲಸಿಕೆ ಲಭ್ಯವಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ಇದರಂತೆ 18 ಮೇಲ್ಪಟ್ಟವರು ಪ್ರಥಮ ಹಾಗೂ 2ನೇ ಡೋಸ್ ಕೋವಿಡ್ ಲಸಿಕೆಯನ್ನು ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ಪಡೆಯಬಹುದು. ಕೋವಿಶೀಲ್ಡ್ ಪ್ರಥಮ ಡೋಸ್ ಹಾಗೂ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ 2ನೇ ಡೋಸ್ ಲಭ್ಯವಿರುತ್ತದೆ.

ಪ್ರಥಮ ಡೋಸ್ ಲಸಿಕೆ ಪಡೆದು ದಿನಾಂಕವನ್ನು ಮರೆತವರೂ ಮೊಬೈಲ್ ಸಂಖ್ಯೆ ಅಥವಾ ಆಧಾರ್ ಕಾರ್ಡಿನೊಂದಿಗೆ ಬಂದು ಪರಿಶೀಲಿಸಿ ಎರಡನೇ ಡೋಸ್ ಪಡೆಯಬಹುದು. ಎರಡನೇ ಡೋಸ್ ಪಡೆಯಲು ನಿಗದಿತ ದಿನದಿಂದ ತುಂಬಾ ತಡವಾದಲ್ಲಿ ಕೋವಿಡ್‌ನಿಂದ ಆಗುವ ತೊಂದರೆ ಹೆಚ್ಚುವುದ ರಿಂದ ಕೂಡಲೇ ಬಂದು ಲಸಿಕೆ ಪಡೆಯುವಂತೆ ಅವರು ತಿಳಿಸಿದ್ದಾರೆ

ಉಡುಪಿ ನಗರ ಪ್ರದೇಶದಲ್ಲಿ ಅ.12ರಂದು ಲಸಿಕೆ ಲಭ್ಯವಿರುವ ಕೇಂದ್ರಗಳ ವಿವರ. ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಜಿಲ್ಲಾ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದಲ್ಲಿ ಕೋವಿಶೀಲ್ಡ್ 200 ಡೋಸ್, ಮಣಿಪಾಲದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಮಾಧವಕೃಪಾ ಶಾಲೆಯಲ್ಲಿ ಕೋವಿಶೀಲ್ಡ್ 200 ಡೋಸ್, ಕೋವ್ಯಾಕ್ಸಿನ್ 100 ಡೋಸ್ ಲಭ್ಯವಿದೆ.

ಯುವಕ ಮಂಡಲ ಅಂಬಲಪಾಡಿಯಲ್ಲಿ ಕೋವಿಶೀಲ್ಡ್ ಪ್ರಥಮ ಮತ್ತು 2ನೇ ಡೋಸ್ 100, ಇಂದಿರಾನಗರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೋವಿಶೀಲ್ಡ್-100 ಡೋಸ್, ಕೋವ್ಯಾಕ್ಸಿನ್ -50ಡೋಸ್, ಸರಕಾರಿ ತಾಯಿ ಮತ್ತು ಮಕ್ಕಳ (ಬಿಆರ್‌ಎಸ್) ಆಸ್ಪತ್ರೆಯಲ್ಲಿ ಕೋವಿಶೀಲ್ಡ್ 200 ಡೋಸ್ ಲಭ್ಯವಿದೆ.

ಮದರಸಾ ಬೈಲಕೆರೆ ಮಲ್ಪೆಯಲ್ಲಿ ಕೋವಿಶೀಲ್ಡ್-200 ಡೋಸ್, ಮೀನುಗಾರರ ಸಂಘ ಮಲ್ಪೆ ಬಂದರು ಕೋವಿಶೀಲ್ಡ್ -200 ಡೋಸ್, ಕುಂದಾಪುರ ಜೂನಿಯರ್ ಕಾಲೇಜಿನ ಕಲಾಮಂದಿರದಲ್ಲಿ ಕೋವಿಶೀಲ್ಡ್ 500 ಡೋಸ್, ಕೋವ್ಯಾಕ್ಸಿನ್ 100 ಡೋಸ್, ಕಾರ್ಕಳ ಸಾರ್ವಜನಿಕ ತಾಲೂಕು ಆಸ್ಪತ್ರೆಯಲ್ಲಿ ಕೋವಿಶೀಲ್ಡ್-200 ಡೋಸ್, ಕೋವ್ಯಾಕ್ಸಿನ್-50 ಡೋಸ್ ಲಭ್ಯವಿದೆ.

ನವೆಂಬರ್ 15ರೊಳಗೆ ವಿದೇಶ ಪ್ರಯಾಣ ಮಾಡುವವರಲ್ಲಿ ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 28 ದಿನ ಮೀರಿದವರಿಗೆ ಎರಡನೇ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.­

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News