ಮೀನು ಹಿಡಿಯಲು ಹೋದ ವ್ಯಕ್ತಿ ನಾಪತ್ತೆ
Update: 2021-10-11 21:01 IST
ಕುಂದಾಪುರ, ಅ.11: ವಡೇರಹೋಬಳಿ ಗ್ರಾಮದ ಕಾಮತ್ ಹಂಚಿನ ಕಾರ್ಖಾನೆ ಬಳಿ ಅ.10ರಂದು ಸಂಜೆ ವೇಳೆ ಮೀನು ಹಿಡಿಯಲು ಹೋದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ನಾಪತ್ತೆಯಾದವರನ್ನು ವಡೇರಹೋಬಳಿ ಗ್ರಾಮದ ಗುಜ್ಜಿತೋಟದ ನಾನಾ ಸಾಹೇಬ ರಸ್ತೆಯ ನಿವಾಸಿ ದಿನೇಶ್(35) ಎಂದು ಗುರುತಿಸಲಾಗಿದೆ. ಇವರು ಮೀನು ಹಿಡಿಯಲು ಬೀಸು ಬಲೆಯನ್ನು ಹಾಕಲು ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.