ಪಕ್ಷಿಕೆರೆ: ಸಂತ ಜೂದರ ವಾರ್ಷಿಕ ಮಹಾಹಬ್ಬ
Update: 2021-10-11 21:11 IST
ಮಂಗಳೂರು, ಅ.11: ಪುಣ್ಯಕ್ಷೇತ್ರ ಪಕ್ಷಿಕೆರೆಯ ಸಂತ ಜೂದರ ವಾರ್ಷಿಕ ಮಹಾಹಬ್ಬವು ಅ.28ರಂದು ನಡೆಯಲಿದ್ದು, ಈ ಪ್ರಯುಕ್ತ ಅ.12ರಿಂದ 14ರವರೆಗೆ ಜ್ಞಾನಕೂಟ ಜರಗಲಿದೆ.
ಜ್ಞಾನಕೂಟವನ್ನು ಬಿಜೈನ ವಂ.ಸ್ವಾಮಿ ರಿಚ್ಚರ್ಡ್ ಕ್ವಾಡ್ರಸ್ ಎಫ್.ಎಂ. ಮತ್ತು ಬಳಗ ನಡೆಸಿಕೊಡಲಿದ್ದಾರೆ. ಅ.17ರಂದು ಬೆಳಗ್ಗೆ 9ರಿಂದ ಅಪರಾಹ್ನ 1ರ ತನಕ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ. ‘ರಕ್ತ ನೀಡಿ ಜೀವ ಉಳಿಸಿ’ ಧ್ಯೇಯವಾಕ್ಯದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ. 19ರಿಂದ 27ರವರೆಗೆ ಹಬ್ಬದ ತಯಾರಿಯಾಗಿ ಒಂಬತ್ತು ದಿನಗಳ ನೊವೆನಾ ಪೂಜೆ ಪುರಸ್ಕಾರ ನಡೆಯಲಿವೆ.
ವಾರ್ಷಿಕ ಮಹಾಹಬ್ಬ: ಅ.28ರಂದು ವಾರ್ಷಿಕ ಮಹಾಹಬ್ಬದ ಬಲಿಪೂಜೆ ಬೆಳಗ್ಗೆ 8 ಗಂಟೆಗೆ ಹಾಗೂ ಸಂಭ್ರಮದ ಬಲಿಪೂಜೆ ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಪೂಜೆಯನ್ನು ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ಹಾಗೂ ಪ್ರಧಾನ ಧರ್ಮಗುರು ಅತೀ ವಂ. ಸ್ವಾಮಿ ಮ್ಯಾಕ್ಸಿಂ ನೊರೊನ್ಹಾ ನೆರವೇರಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.