ಬೆಳ್ತಂಗಡಿ: ಪ್ರವಾದಿ ನಿಂದನೆ, ಪ್ರಚೋದನಕಾರಿ ಭಾಷಣ ವಿರುದ್ಧ ಎಸ್ಕೆಎಸ್ಸೆಸ್ಸೆಫ್ ಪ್ರತಿಭಟನೆ

Update: 2021-10-11 17:06 GMT

ಬೆಳ್ತಂಗಡಿ : ಮುಸ್ಲಿಂ ಸಮಾಜದ ವಿರುದ್ಧ ಶಡ್ಯಂತ್ರಗಳು ನಾನಾ ಬಗೆಯಿಂದ ನಡೆಯುತ್ತಿದೆ. ಅದರ ವಿರುದ್ಧ ಸರಕಾರ ಸೂಕ್ತ ಕ್ರಮ ಜರುಗಿಸಿ ಕೋಮು ಪ್ರಚೋದನೆ ಎಸಗುವವರ ವಿರುದ್ಧ ಕಠಿಣ ಕ್ರಮ‌ಕೈಗೊಂಡು ರಾಜ್ಯದಲ್ಲಿ ಶಾಂತಿ ಕಾಪಾಡಬೇಕು ಎಂದು ಎಸ್‌ಕೆಎಸ್‌ಎಸ್ಎಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಒತ್ತಾಯಿಸಿದ್ದಾರೆ.

ಎಸ್ಕೆಎಸ್ಸೆಸ್ಸೆಫ್ ಬೆಳ್ತಂಗಡಿ ವಲಯದ ನೇತೃತ್ವದಲ್ಲಿ ಸೋಮವಾರ ಬೆಳ್ತಂಗಡಿ ಮಿನಿ‌ವಿಧಾನ ಸೌಧದ ಬಳಿ‌ ನಡೆದ ಪ್ರತಿಭಟನೆಯನ್ನುದ್ಧೇಶಿಸಿ‌ ಅವರು ದಿಕ್ಸೂಚಿ ಭಾಷಣ ಮಾಡುತ್ತಿದ್ದರು.

ಪ್ರತಿಭಟನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್ಕೆಎಸ್ಸೆಸ್ಸೆಫ್ ಬೆಳ್ತಂಗಡಿ ವಲಯಾಧ್ಯಕ್ಷ, ಉಪ್ಪಿನಂಗಡಿ‌ ಮಾಲಿಕುದ್ದೀನಾರ್ ಮಸ್ಜಿದ್ ಖತೀಬ್ ನಝೀರ್ ಅಝ್ಹರಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ಶಂಶುದ್ದೀನ್ ದಾರಿಮಿ, ಹನೀಫ್‌ ಧೂಮಳಿಕೆ, ಹಕೀಂ‌ ಬಂಗೇರಕಟ್ಟೆ, ರಝಾಕ್ ಕನ್ನಡಿಕಟ್ಟೆ, ಮಮ್ಮಿಕುಂಞಿ ಅರೆಕ್ಕಲ್, ಶಕೀಲ್ ಅರೆಕ್ಕಲ್, ಇಮ್ರಾನ್ ಕಕ್ಕಿಂಜೆ, ಅಬೂಬಕರ್ ಮುಸ್ಲಿಯಾರ್ ಸೋಮಂತಡ್ಕ, ಸಾದಿಕ್ ಕಟ್ಟೆ, ಹಾಶಿಂ ಪೈಝಿ ಪಾಂಡವರಕಲ್ಲು, ಅಬೂಬಕ್ಕರ್ ಬಂಗೇರಕಟ್ಟೆ, ನವಾಝ್ ಕಟ್ಟೆ, ಸಮದ್ ಮಾಸ್ಟರ್, ಸದಕತುಲ್ಲಾ ದಾರಿಮಿ ಹಾಗೂ ಬೆಳ್ತಂಗಡಿ ದಾರುಸ್ಸಲಾಂ‌ ವಿದ್ಯಾರ್ಥಿಗಳು, ಹಲವು ಜಮಾಅತ್‌ಗಳ‌ ನೇತಾರರು, ಸಾರ್ವಜನಿಕರು ಭಾಗವಹಿಸಿದ್ದರು.

ಎಸ್ಕೆಎಸ್ಸೆಸ್ಸೆಫ್ ವಲಯ ಕಾರ್ಯದರ್ಶಿ ರಿಯಾಝ್ ಪೈಝಿ ಸ್ವಾಗತಿಸಿದರು. ಬೆಳ್ತಂಗಡಿ ರೇಂಜ್ ಅಧ್ಯಕ್ಷ ಅಶ್ರಫ್ ಫೈಝಿ ಉದ್ಘಾಟಿಸಿದರು. ಕೌಸರ್ ಪುಂಜಾಲಕಟ್ಟೆ ನಿರೂಪಿಸಿ, ಸಂಚಾಲಕ ಸಿರಾಜ್ ಚಿಲಿಂಬಿ‌ ವಂದಿಸಿದರು. ಪ್ರತಿಭಟನೆ ಬಳಿಕ ತಹಶಿಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News