×
Ad

ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯಿಂದ ಉಚಿತ ಕೋವಿಡ್-19 ಲಸಿಕೆ: ಕೇಂದ್ರ ಸಚಿವ

Update: 2021-10-12 00:05 IST
photo:ANI

ಟಿನ್ಸುಕಿಯಾ (ಅಸ್ಸಾಂ) ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಗಳು ಸರಕಾರವು ಜನರಿಗೆ ಒದಗಿಸಿದ ಉಚಿತ ಕೋವಿಡ್ -19 ಲಸಿಕೆಗಳಿಗೆ ಧನಸಹಾಯ ಒದಗಿಸುತ್ತದೆ ಎಂದಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ರಾಮೇಶ್ವರ ತೇಲಿ  ತೈಲ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದ ಸಚಿವರು, ಪೆಟ್ರೋಲ್ ಬೆಲೆ ಹೆಚ್ಚಿಲ್ಲ ಆದರೆ ಅದರ ಮೇಲೆ ತೆರಿಗೆ ವಿಧಿಸಲಾಗುತ್ತದೆ ಹಾಗೂ  ಇದು ಸಂಪನ್ಮೂಲಗಳನ್ನು ಹೆಚ್ಚಿಸುವ ಸಾಧನವಾಗಿದೆ ಎಂದು ಹೇಳಿದರು.

"ಪೆಟ್ರೋಲ್ ಬೆಲೆ ಹೆಚ್ಚಿಲ್ಲ. ಅದರಲ್ಲಿ ತೆರಿಗೆ ಇದೆ. ಇಂಧನಕ್ಕಿಂತ (ಪ್ಯಾಕೇಜ್ಡ್ ಮಿನರಲ್) ನೀರಿನ ಬೆಲೆ ಹೆಚ್ಚು. ಪೆಟ್ರೋಲ್ ಬೆಲೆ 40 ರೂ., ಅಸ್ಸಾಂ ಸರಕಾರ 28 ರೂ.ವ್ಯಾಟ್ ವಿಧಿಸುತ್ತದೆ. ಪೆಟ್ರೋಲಿಯಂ ಸಚಿವಾಲಯ 30 ರೂ. ವಿಧಿಸುತ್ತದೆ. ಆಗ ಪೆಟ್ರೋಲ್ ಬೆಲೆ 98 ರೂ. ಆಗುತ್ತದೆ. ನೀವು ಹಿಮಾಲಯದ ನೀರನ್ನು ಕುಡಿದರೆ, ಒಂದು ಬಾಟಲಿಯ ಬೆಲೆ ರೂ .100 ಇರುತ್ತದೆ. ತೈಲಕ್ಕಿಂತ ನೀರಿನ ಬೆಲೆ ಹೆಚ್ಚು'' ಎಂದು ಅವರು ಹೇಳಿದರು.

ಕೇಂದ್ರ ಸರಕಾರ ಸಂಗ್ರಹಿಸುವ ತೆರಿಗೆಗಳಿಂದ ಉಚಿತ ಲಸಿಕೆಗಳಿಗೆ ಹಣ ಬರುತ್ತದೆ ಎಂದು ಸಚಿವರು ಹೇಳಿದರು.

"ನೀವು ಉಚಿತ ಲಸಿಕೆಯನ್ನು ತೆಗೆದುಕೊಳ್ಳಬೇಕು, ಹಣ ಎಲ್ಲಿಂದ ಬರುತ್ತದೆ? ನೀವು ಹಣವನ್ನು ಪಾವತಿಸಿಲ್ಲ, ಹಣವನ್ನು ಈ ರೀತಿ ಸಂಗ್ರಹಿಸಲಾಗಿದೆ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News