ಭಾವನೆಗಳಿಗೆ ಧಕ್ಕೆ ಆದಾಗ ರಿಯಾಕ್ಷನ್ ಸಹಜ: ಸಿಎಂ ಬಸವರಾಜ ಬೊಮ್ಮಾಯಿ

Update: 2021-10-13 12:15 GMT

ಮಂಗಳೂರು : ದ.ಕ.ಜಿಲ್ಲೆಯಲ್ಲಿ ನಡೆಯುತ್ತಿರುವ ಅನೈತಿಕ ಪೊಲೀಸ್‌ ಗಿರಿ ವಿಚಾರವು ತುಂಬಾ ಸೂಕ್ಷ್ಮವಾಗಿರುತ್ತದೆ. ಭಾವನಾತ್ಮಕ ವಿಚಾರಗಳಿಗೆ ಸಂಬಂಧಿಸಿದ ಆ್ಯಕ್ಷನ್‌ಗೆ ರಿಯಾಕ್ಷನ್ ಕೂಡಾ ಸಹಜವಾಗಿರುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಂದು ಅನೈತಿಕ ಪೊಲೀಸ್ ಗಿರಿ ಆಗಾಗ ಆಗ್ತಾ ಇದೆ, ನೀವು ಅದನ್ನು ಸಹಿಸಲ್ಲ ಎಂದು ಹೇಳಿದ್ದೀರಿ ಆದರೆ ನಿಮ್ಮದೇ ಒಬ್ಬರು ಶಾಸಕರು ಪೊಲೀಸ್ ಠಾಣೆಗೆ ಹೋಗಿ ಆರೋಪಿಗಳನ್ನು ಕರೆದುಕೊಂಡು ಬರುತ್ತಾರೆ ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಪರ್ತಕರ್ತರು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನಿಸಿದ್ದಾರೆ. 

ಈ ಬಗ್ಗೆ ಸಿಎಂ ಅವರ ಪ್ರತಿಕ್ರಿಯೆ...

"ಈಗ ನೋಡಿ ಇದು ಬಹಳ ಸೂಕ್ಷ್ಮವಾದ ವಿಷಯವಾಗಿದೆ. ಸಮಾಜದಲ್ಲಿ ಜವಾಬ್ದಾರಿ ನಾವೆಲ್ಲರೂ ಕೂಡ ಹೊರಬೇಕಾಗುತ್ತದೆ. ಸಮಾಜದಲ್ಲಿ ಹಲವಾರು ಭಾವನೆಗಳಿದ್ದಾವೆ. ಆ ಭಾವನೆಗಳಿಗೆ ಧಕೆ ಬಾರದ ರೀತಿಯಲ್ಲಿ ನಡೆದುಕೊಳ್ಳಬೇಕಾಗುತ್ತದೆ. ಆ ಭಾವನೆಗಳಿಗೆ ಧಕ್ಕೆ ಬಂದಾಗ ಸಹಜವಾಗಿ ಆ್ಯಕ್ಷನ್ ಆ್ಯಂಡ್ ರಿಯಾಕ್ಷನ್ ಆಗುತ್ತದೆ. ಆದ್ದರಿಂದ ನಮ್ಮ ಕರ್ತವ್ಯ, ಸರಕಾರದ ಕರ್ತವ್ಯ, ಕಾನೂನು ಸುವ್ಯಸ್ಥೆಯ ಜೊತೆಗೆ ಸಾಮಾಜಿಕವಾಗಿಯೂ ಕೂಡ ಸಾಮರಸ್ಯವನ್ನು ಕಾಪಾಡುವುದಕ್ಕೆ ನಾವೆಲ್ಲರೂ ಕೂಡ ಕ್ರಮ ತೆಗೆದುಬೇಕು. ಅದಕ್ಕೆ ಎಲ್ಲರೂ ಕೂಡ ಸಹಕಾರಕೊಡಬೇಕು. ಕೆಲವು ಯುವಕರು ಸಮಾಜಕ್ಕೆ, ಭಾವನೆಗಳಿಗೆ ಧಕ್ಕೆಯಾಗದಂತೆ ಅವರೂ ಕೂಡ ನೋಡಿಕೊಳ್ಳಬೇಕಾಗುತ್ತದೆ. ಇದು ಒಂದು ಸಾಮಾಜಿಕವಾಗಿರುವ ಪ್ರಶ್ನೆಯಾಗಿದೆ. ಇದರ ಬಗ್ಗೆ ನಾವು ಖಂಡಿತವಾಗಿಯೂ ಮಾಡಬೇಕು, ಮತ್ತೆ ಮರಳಿಕೆ ಎಂಬುದು ಬೇಕಲ್ಲ ಸಮಾಜದಲ್ಲಿ. ನೈತಿಕತೆ ಇಲ್ಲದೆ ಬದುಕಕಾಗುತ್ತಾ ? ಇವತ್ತು ನಾವು ನೈತಿಕತೆ ಇಲ್ಲದೆ ಬದುಕಕಾಗಲ್ಲ, ನಮ್ಮ ಎಲ್ಲಾ ಸಂಬಂಧಗಳು, ನಮ್ಮ ಶಾಂತಿ ಸುವ್ಯವಸ್ಥೆ ಇರುವಂತಹದ್ದು ನಮ್ಮ ಮೇಲೆ ನಮ್ಮ ಕಂಟ್ರೋಲ್ ಇಡುವಂತಹದ್ದು ನೈತಕತೆ. ನೈತಿಕತೆ ಇಲ್ಲದಾಗ ಎಲ್ಲಾ ತರದ ಆ್ಯಕ್ಷನ್ ರಿಯಾಕ್ಷನ್ ಗಳು ಇರುತ್ತವೆ. ಆದ್ದರಿಂದ ಪ್ರತಿಯೊಬ್ಬರದ್ದೂ ಹೊಣೆಗಾರಿಕೆ ಇದೆ. ಅವರು ಇವರು ಎಂದು ನಾನು ಹೇಳಲ್ಲ. ಪ್ರತಿಯೊಬ್ಬರದ್ದೂ ಹೊಣೆಗಾರಿಕೆ ಇದೆ ಎಂದು ಸಿಎಂ ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News