ಕೇರಳ: ಪತ್ನಿಯನ್ನು ಹಾವು ಕಚ್ಚಿಸಿ ಕೊಂದ ಪತಿಗೆ ಜೀವಾವಧಿ ಶಿಕ್ಷೆ
ಕೊಲ್ಲಂ: ನಾಗರಹಾವು ಬಳಸಿ ತನ್ನ ಪತ್ನಿಯನ್ನು ಕೊಂದಿದ್ದಕ್ಕಾಗಿ ಪತಿಗೆ ಕೇರಳದ ಸೆಷನ್ಸ್ ಕೋರ್ಟ್ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಕೊಲೆ, ವಿಷಪ್ರಾಶನ, ಸಾಕ್ಷ್ಯ ನಾಶ ಹಾಗೂ ತನ್ನ 25 ವರ್ಷದ ಪತ್ನಿ ಉತ್ರಾಳನ್ನು ಕೊಲ್ಲಲು ಮಾಡಿದ ಮೊದಲ ಪ್ರಯತ್ನಕ್ಕೆ ಕೊಲೆ ಯತ್ನ ಆರೋಪದಲ್ಲಿ ಅಕ್ಟೋಬರ್ 11ರಂದು ಮಹಿಳೆಯ ಪತಿ ಸೂರಜ್ ಎಸ್. ಕುಮಾರ್ ಅವರನ್ನು ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿತ್ತು.
ಶಿಕ್ಷೆಯನ್ನು ಪ್ರಕಟಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮನೋಜ್ ಎಂ. "ಇದು ಅಪರೂಪದ ಪ್ರಕರಣವಾಗಿದೆ. ಆದರೆ ಅಪರಾಧಿಗೆ ಈಗ 28 ವರ್ಷ. ಮರಣದಂಡನೆಗೆ ಬದಲಾಗಿ ಅವನಿಗೆ ಜೀವಾವಧಿ ಶಿಕ್ಷೆ ನೀಡಲು ನಿರ್ಧರಿಸಿದೆ'' ಎಂದರು.
ಕೊಲೆ ಯತ್ನದ ಅಪರಾಧಕ್ಕಾಗಿ ನ್ಯಾಯಾಲಯವು ಕುಮಾರ್‌ಗೆ ಜೀವಾವಧಿ ಶಿಕ್ಷೆ, ವಿಷ ನೀಡಿದ್ದಕ್ಕೆ 10 ವರ್ಷ ಹಾಗೂ ಸಾಕ್ಷ್ಯ ನಾಶಕ್ಕೆ ಏಳು ವರ್ಷ ಶಿಕ್ಷೆ ನೀಡಿದೆ ಎಂದು ವಕೀಲರು ಹೇಳಿದರು.
ನ್ಯಾಯಾಲಯವು ಅಪರಾಧಿಗೆ ಒಟ್ಟುರೂ. 5.85 ಲಕ್ಷ ದಂಡ ವಿಧಿಸಿದೆ ಎಂದು ವಕೀಲರು ಹೇಳಿದರು.
ಕಳೆದ ವರ್ಷ ಮೇ ತಿಂಗಳಲ್ಲಿ ಸೂರಜ್ ತನ್ನ ಪತ್ನಿ ಉತ್ರಾಳನ್ನುನಿದ್ದೆಯಲ್ಲಿದ್ದಾಗ ನಾಗರ ಹಾವು ಕಚ್ಚಿಸಿ ಸಾಯಿಸಿದ್ದ.