ಬಿಜೆಪಿ ಶೀಘ್ರದಲ್ಲೇ ಸಾವರ್ಕರ್ ರನ್ನು ‘ರಾಷ್ಟ್ರಪಿತ’ ಎಂದು ಘೋಷಿಸಲಿದೆ: ಅಸದುದ್ದೀನ್ ಉವೈಸಿ

Update: 2021-10-13 08:18 GMT
ಅಸದುದ್ದೀನ್ ಉವೈಸಿ (File Photo: PTI)

ಹೈದರಾಬಾದ್ (ತೆಲಂಗಾಣ): "ಮಹಾತ್ಮಾ ಗಾಂಧಿಯವರ ಸಲಹೆಯ ಮೇರೆಗೆ ಸಾವರ್ಕರ್ ಬ್ರಿಟಿಷರಿಗೆ ಕ್ಷಮಾದಾನ ಅರ್ಜಿಗಳನ್ನು ಬರೆದಿದ್ದಾರೆ" ಎಂಬ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಯನ್ನು ಟೀಕಿಸಿರುವ  ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ, “ವಿನಾಯಕ ದಾಮೋದರ್ ಸಾವರ್ಕರ್ ಅವರನ್ನು ಬಿಜೆಪಿ ಶೀಘ್ರದಲ್ಲೇ ‘ರಾಷ್ಟ್ರಪಿತ’ ಎಂದು ಘೋಷಿಸಲಿದೆ’’ ಎಂದು ಹೇಳಿದ್ದಾರೆ.

ANI ಯೊಂದಿಗೆ ಮಾತನಾಡಿದ ಉವೈಸಿ, "ಅವರು (ಬಿಜೆಪಿ) ವಿಕೃತ ಇತಿಹಾಸವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಇದು ಮುಂದುವರಿದರೆ  ಅವರು ಮಹಾತ್ಮ ಗಾಂಧಿಯನ್ನು ತೆಗೆದು ಹಾಕುತ್ತಾರೆ ಹಾಗೂ ಮಹಾತ್ಮಾ ಗಾಂಧಿಯವರ ಹತ್ಯೆಯ ಆರೋಪಿಯಾಗಿದ್ದ ಸಾವರ್ಕರ್ ಅವರನ್ನು ‘’ರಾಷ್ಟ್ರಪಿತ’’ನನ್ನಾಗಿ ಘೋಷಿಸುತ್ತಾರೆ ಎಂದರು

ಮಂಗಳವಾರ ಸಾವರ್ಕರ್ ಕುರಿತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್, ಮಹಾತ್ಮ ಗಾಂಧಿಯವರ ಸಲಹೆಯ ಮೇರೆಗೆ ಸಾವರ್ಕರ್ ಬ್ರಿಟಿಷರಿಗೆ ಕ್ಷಮಾದಾನ ಅರ್ಜಿಗಳನ್ನು ಬರೆದಿದ್ದರು ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News