×
Ad

ಸದಾ ಗಾಲಿಕುರ್ಚಿಯಲ್ಲಿ ಕಾಣಿಸುವ ಪ್ರಜ್ಞಾ ಠಾಕುರ್ ಅವರ ಗರ್ಬಾ ನೃತ್ಯ ವೀಡಿಯೋ ವೈರಲ್ !

Update: 2021-10-13 16:08 IST
Screengrab(Twitter/@brajeshabpnews)

ಹೊಸದಿಲ್ಲಿ: ಮಾಲೆಗಾಂವ್ ಸ್ಫೋಟ ಆರೋಪಿ ಹಾಗೂ ಭೋಪಾಲ್ ಬಿಜೆಪಿ ಸಂಸದೆ ಪ್ರಜ್ಞಾ ಠಾಕುರ್ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆಂದೇ ನಂಬಲಾಗಿದೆ ಹಾಗೂ ಅದಕ್ಕೆ ಪೂರಕವೆಂಬಂತೆ ಅವರು ಆಗಾಗ ಗಾಲಿಕುರ್ಚಿಯಲ್ಲಿಯೇ ಕಾಣಿಸುತ್ತಾರೆ. ಆದರೆ ನವರಾತ್ರಿ ಸಂದರ್ಭ ಅವರು ಗರ್ಬಾ ಹಾಡುಗಳಿಗೆ ನರ್ತಿಸುತ್ತಿರುವ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೀಡಿಯೋದಲ್ಲಿ ಪ್ರಜ್ಞಾ ಠಾಕುರ್ ಅವರು ಇತರ ಮಹಿಳೆಯರ ಜತೆ ನರ್ತಿಸುತ್ತಿರುವುದು ಕಾಣಿಸುತ್ತದೆ. ಬುಧವಾರ ರಾತ್ರಿ ಈ ವೀಡಿಯೋ ಚಿತ್ರೀಕರಿಸಲಾಗಿದೆ ಎನ್ನಲಾಗಿದ್ದು, ಎಬಿಪಿ ನ್ಯೂಸ್ ಪತ್ರಕರ್ತ ಬೃಜೇಶ್ ರಾಜಪುತ್ ಸಹಿತ ಹಲವಾರು ಪತ್ರಕರ್ತರು ಹಾಗೂ ಇತರರು ಈ ವೀಡಿಯೋ ಶೇರ್ ಮಾಡಿದ್ದಾರೆ.

ಇನ್ನೋರ್ವ ಹಿರಿಯ ಪತ್ರಕರ್ತ ಅಭಿಸಾರ್ ಶರ್ಮ ಕೂಡ ಈ ವೀಡಿಯೋ ಶೇರ್ ಮಾಡಿದ್ದಾರಲ್ಲದೆ, ನ್ಯಾಯಾಲಯದಿಂದ ಸಮನ್ಸ್ ಬರುವಾಗ ಪ್ರಜ್ಞಾ ಠಾಕುರ್ ಅವರು ಮತ್ತೆ ಗಾಲಿಕುರ್ಚಿಯ ಮೊರೆ ಹೋಗುತ್ತಾರೆಂದು ವ್ಯಂಗ್ಯವಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News