ಸಾಂಪ್ರದಾಯಿಕ ರಂಗೋಲಿ ಸ್ಪರ್ಧೆ
Update: 2021-10-13 20:41 IST
ಉಡುಪಿ ಅ.13: ಮಾರ್ಪಳ್ಳಿಯ ಶ್ರೀಮಹಾಲಿಂಗೇಶ್ವರ ಭಜನಾ ಮಂಡಳಿ ವತಿಯಿಂದ ಮಾರ್ಪಳ್ಳಿಯ ಗ್ರಾಮಸ್ಥರು ಮತ್ತು ಭಜನಾ ಮಂಡಳಿಯ ಸದಸ್ಯರಿಗಾಗಿ ಸಾಂಪ್ರದಾಯಿಕ ರಂಗೋಲಿ ಸ್ಪರ್ಧೆಯನ್ನು ಅ.24 ರಂದು ಬೆಳಿಗ್ಗೆ 8.30ಕ್ಕೆ ಶ್ರೀಗದ್ದುಗೆ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಏರ್ಪಡಿಸಲಾಗಿದೆ.
ಈ ಸ್ಪರ್ಧೆ 2 ವಿಭಾಗದಲ್ಲಿ ನಡೆಯಲಿದೆ. ಮೊದಲ ವಿಭಾಗದಲ್ಲಿ 15 ವರ್ಷದ ಒಳಗಿನವರಿಗೆ ಹಾಗೂ 2ನೆ ವಿಭಾಗದಲ್ಲಿ 15 ವರ್ಷ ಮೇಲ್ಪಟ್ಟವರಿಗೆ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯ ವಿಜೇತರಿಗೆ ಪ್ರಥಮ 2001ರೂ., ದ್ವಿತೀಯ 1001 ರೂ. ಹಾಗೂ ತೃತೀಯ 501 ರೂ. ನಗದು ಬಹುಮಾನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9986544763, 9880990193, 9449170167ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.