ಕಾಪು ಮಾರಿಗುಡಿಗೆ ಮುಖ್ಯಮಂತ್ರಿ ಬೊಮ್ಮಾಯಿ ಭೇಟಿ
Update: 2021-10-13 20:47 IST
ಉಡುಪಿ, ಅ.13: ಜಿಲ್ಲೆಯ ಕಾಪುವಿನಲ್ಲಿರುವ ಹೊಸ ಮಾರಿಗುಡಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ಇದೇ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳನ್ನು ಅವರು ಪರಿಶೀಲಿಸಿದರು. ಮುಜರಾಯಿ ಇಲಾಖೆಯ ವತಿಯಿಂದ ಜೀರ್ಣೋದ್ಧಾರ ಹಾಗೂ ದೇವಸ್ಥಾನಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಗಳು ಇದೇ ವೇಳೆ ಭರವಸೆ ನೀಡಿದರು.
ಮುಖ್ಯಮಂತ್ರಿಯವರೊಂದಿಗೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ವಿ. ಸುನೀಲ್ ಕುಮಾರ್ ಶಾಸಕರಾದ ಲಾಲಾಜಿ ಮೆಂಡನ್ ಮತ್ತು ಕೆ.ರಘುಪತಿ ಭಟ್ ಮತ್ತಿತರರು ಉಪಸ್ಥಿತರಿದ್ದರು.