ಐಪಿಎಲ್ ಕ್ವಾಲಿಫೈಯರ್-2: ಡೆಲ್ಲಿಯನ್ನು ಕೆಡವಿದ ಕೋಲ್ಕತಾ ಫೈನಲ್ ಗೆ

Update: 2021-10-13 17:53 GMT
photo: twitter

ಶಾರ್ಜಾ: ಚೊಚ್ಚಲ ಐಪಿಎಲ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 3 ವಿಕೆಟ್ ಗಳ ಅಂತರದಿಂದ ರೋಚಕವಾಗಿ ಮಣಿಸಿದ  ಕೋಲ್ಕತಾ ನೈಟ್ ರೈಡರ್ಸ್ ತಂಡ 14ನೇ ಆವೃತ್ತಿಯ ಐಪಿಎಲ್ ನಲ್ಲಿ ಫೈನಲ್ ತಲುಪಿದೆ. ಕೋಲ್ಕತಾವು ಶುಕ್ರವಾರ ನಡೆಯಲಿರುವ ಫೈನಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸವಾಲನ್ನು ಎದುರಿಸಲಿದೆ.

ಬುಧವಾರ ನಡೆದ ಐಪಿಎಲ್ ನ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲುವಿಗೆ 136 ರನ್ ಗುರಿ ಪಡೆದ ಕೆಕೆಆರ್ 19.5 ಓವರ್ ಗಳಲ್ಲಿ 7. ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿತು. 2 ಎಸೆತದಲ್ಲಿ 6 ರನ್ ಅಗತ್ಯವಿದ್ದಾಗ ಸಿಕ್ಸರ್ ಸಿಡಿಸಿದ ರಾಹುಲ್ ತ್ರಿಪಾಠಿ(12) ಕೆಕೆಆರ್ ಗೆ ರೋಚಕ ಗೆಲುವು ತಂದರು.

ಕೆಕೆಆರ್ ಪರ ಮೊದಲ ವಿಕೆಟಿಗೆ 12.2 ಓವರ್ ಗಳಲ್ಲಿ 96 ರನ್ ಕಲೆ ಹಾಕಿದ ವೆಂಕಟೇಶ್ ಅಯ್ಯರ್ (55,41 ಎಸೆತ, 4 ಬೌಂಡರಿ, 3 ಸಿಕ್ಸರ್) ಹಾಗೂ ಶುಭಮನ್ ಗಿಲ್(46, 46 ಎಸೆತ, 1 ಬೌಂಡರಿ, 1 ಸಿಕ್ಸರ್)ಭದ್ರ ಬುನಾದಿ ಹಾಕಿಕೊಟ್ಟರು. ವೆಂಕಟೇಶ್ ಆಕರ್ಷಕ ಅರ್ಧಶತಕದ ಮೂಲಕ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದರು. ಡೆಲ್ಲಿ ಪರ ಕಾಗಿಸೊ ರಬಾಡ(2-23), ಆರ್. ಅಶ್ವಿನ್ (2-27) ಹಾಗೂ ಅನ್ರಿಚ್  ನೊಟ್ಜೆ(2-31)ತಲಾ 2 ವಿಕೆಟ್ ಪಡೆದರು.

ಇದಕ್ಕೂ ಮೊದಲು  ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದಿದ್ದ ಡೆಲ್ಲಿ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News