ಮಂಗಳೂರು: ವಿಹಿಂಪ ಕಚೇರಿಯಲ್ಲಿ ತ್ರಿಶೂಲ ವಿತರಣೆ
Update: 2021-10-14 19:52 IST
ಮಂಗಳೂರು, ಅ.14: ನಗರದ ಕದ್ರಿಯ ವಿಶ್ವ ಹಿಂದೂ ಪರಿಷತ್ ಕಚೇರಿಯಲ್ಲಿ ಗುರುವಾರ ನಡೆದ ಆಯುಧ ಪೂಜೆ ಕಾರ್ಯಕ್ರಮ ದಲ್ಲಿ ವಿಹಿಂಪ ಮುಖಂಡರು ಕಾರ್ಯಕರ್ತರಿಗೆ ತ್ರಿಶೂಲ ವಿತರಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ ಕಚೇರಿ ‘ವಿಶ್ವ ಶ್ರೀ’ಯಲ್ಲಿ ನಡೆದ ಆಯುಧ ಪೂಜೆಯ ಸಂದರ್ಭ ತ್ರಿಶೂಲ ಹಂಚಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಿಂದ ಆಕ್ಷೇಪ ವ್ಯಕ್ತವಾಗಿದೆ. ಪೊಲೀಸ್ ಇಲಾಖೆಯು ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯ ಕೇಳಿ ಬಂದಿದೆ.
ತ್ರಿಶೂಲ ವಿತರಣೆ ಕಾರ್ಯಕ್ರಮದಲ್ಲಿ ಬಜರಂಗದಳ ನಾಯಕ ರಘು ಸಕಲೇಶಪುರ, ವಿಹಿಂಪ ನಾಯಕ ಶರಣ್ ಪಂಪ್‌ವೆಲ್ ಮತ್ತಿತರರು ಪಾಲ್ಗೊಂಡಿದ್ದರು.