​ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Update: 2021-10-14 15:24 GMT

ಬೈಂದೂರು, ಅ.14: ತಾನು ಕೆಲಸ ಮಾಡುತಿದ್ದ ಸಂಸ್ಥೆಯ ಮಾಲಕ ಸರಿಯಾಗಿ ವೇತನ ಹಾಗೂ ವ್ಯವಹಾರದ ಬಾಬ್ತು ಪಾವತಿಸದ ಬಗ್ಗೆ ಮನನೊಂದ ವ್ಯಕ್ತಿಯೊಬ್ಬರು ಮೊಬೈಲ್‌ ನಲ್ಲಿ ವೀಡಿಯೊ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಡ್ತರೆ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಮಂಗಳೂರು ಕದ್ರಿ ನಿವಾಸಿ ಮನೋಜ್ ಆರ್.ಸಾಲಿಯಾನ್ (45) ಎಂದು ಗುರುತಿಸಲಾಗಿದೆ. ಇವರು ಕಳೆದ ನಾಲ್ಕು ವರ್ಷಗಳಿಂದ ಭಟ್ಕಳದ ಶಿರಾಲಿಯಲ್ಲಿರುವ ನೆಟ್‌ಕಾನ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಅದರ ಮಾಲಕ ಪ್ರಸನ್ನ ಡಿಕೋಸ್ತ್ ತನಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ ಎಂದು ಪತ್ನಿ ಬಳಿ ದೂರಿದ್ದರೆನ್ನಲಾಗಿದೆ.

ಅವರು ಅ.13ರಂದು ಯಡ್ತರೆ ಗ್ರಾಮದ ಶಿವದರ್ಶನ್ ಲಾಡ್ಜ್‌ನಲ್ಲಿ ರೂಮ್ ಮಾಡಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಮನೋಜ್‌ರ ಮೊಬೈಲ್‌ನಲ್ಲಿ ವಿಡಿಯೋ ತುಣುಕುಗಳು ಲಭ್ಯವಾಗಿದ್ದು, ಇದರಲ್ಲಿ ಪ್ರಸನ್ನ ಡಿಕೋಸ್ತ ಅವರು ತನಗೆ ಮೋಸ ಮಾಡಿದ್ದು, ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಅಣ್ಣನ ಸಾವಿನ ಬಗ್ಗೆ ಅನುಮಾನವಿರುವುದಾಗಿ ಮನೋಜ್‌ರ ತಂಗಿ ರಂಜಿತ ಬೈಂದೂರು ಠಾಣೆಯಲ್ಲಿ ದಾಖಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.

ಬ್ರಹ್ಮಾವರ: ಕಳೆದ ಐದು ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತಿದ್ದ ಕೆಂಜೂರು ಗ್ರಾಮದ ಬೀರ್ಲಬೆಟ್ಟು ನಿವಾಸಿ ಸುಂದರ ನಾಯ್ಕಾ (49) ಎಂಬವರು ಇದರಿಂದ ಮನನೊಂದು ಮನೆಯ ಬಳಿ ಇರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೃಷಿ ಕೆಲಸ ಮಾಡಿಕೊಂಡಿದ್ದ ಇವರಿಗೆ ದೊಡ್ಡಣಗುಡ್ಡೆ ಆಸ್ಪತ್ರೆಯಲ್ಲಿ ಮಾನಸಿಕ ಕಾಯಿಲೆಗೆ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಪತ್ನಿ ಬ್ರಹ್ಮಾವರ ಠಾಣೆಯಲ್ಲಿ ದಾಖಲಿಸಿ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News