×
Ad

"ಹೆತ್ತಾಗ ಹೆಣ್ಣು ಮಗು ಎಂದರು, ನಾವು ನೋಡುವಾಗ ಗಂಡು ಮಗು !": ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆ ವಿರುದ್ಧ ಪೋಷಕರ ಆರೋಪ

Update: 2021-10-15 01:42 IST

ಮಂಗಳೂರು: ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಹೆಣ್ಣು ಮಗು ಎಂದು ದಾಖಲೆ ನೀಡಿ ಬಳಿಕ  ಮಗುವಿನ ಹೆಚ್ಚಿನ ಚಿಕಿತ್ಸೆಗೆ 18 ದಿನಗಳ ಬಳಿಕ ಬೇರೆ ಆಸ್ಪತ್ರೆಗೆ ದಾಖಲಿಸಿದಾಗ ಅಲ್ಲಿ ಮಗು ಗಂಡು ಎಂದು ತಿಳಿದು ಬಂದಿದ್ದು, ಪೋಷಕರಲ್ಲಿ ಗೊಂದಲ ಉಂಟು ಮಾಡಿದೆ. 

ಕುಂದಾಪುರದ ಮಹಿಳೆಯೋರ್ವರನ್ನು ಸೆಪ್ಟೆಂಬರ್ 27ರಂದು ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ ಹೆರಿಗೆಗೆಂದು ದಾಖಲಿಸಲಾಗಿತ್ತು. ಅವರಿಗೆ ಬಿಪಿ ಇದ್ದ ಕಾರಣ ಆಪರೇಷನ್ ಮಾಡಿ ಹೆರಿಗೆ ಮಾಡಿಸಲಾಗಿತ್ತು. ಈ ಸಂದರ್ಭ ಹೆಣ್ಣು ಮಗು ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದರು ಎಂದು ಮಗುವಿನ ತಂದೆ ಮುಸ್ತಫಾ ಹೇಳಿದ್ದಾರೆ.

ಬಳಿಕ ಮಗುವಿನ ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ 18 ದಿನಗಳ ಕಾಲ ಐಸಿಯು ನಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗಿತ್ತು. ಮಗುವಿನ ಆರೋಗ್ಯದ ಬಗ್ಗೆ ವೈದ್ಯರು ಸ್ಪಷ್ಟ ಮಾಹಿತಿ ನೀಡದ ಕಾರಣ ಮಗುವನ್ನು ಬೃಹ್ಮಾವರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಈ ವೇಳೆ ಮಗು ಗಂಡು ಎಂದು ತಿಳಿದು ಬಂದಿದೆ. ನಂತರ ನಾವು ಮಗುವನ್ನು ಮತ್ತೆ ಲೇಡಿಗೋಶನ್ ಆಸ್ಪತ್ರೆಗೆ ಕರೆತಂದು ವೈದ್ಯಾಧಿಕಾರಿ ಬಳಿ ಈ ಕುರಿತು ಪ್ರಶ್ನಿಸಿದಾಗ ಈ ಮಗು ನಿಮ್ಮದೇ ಆಗಿದ್ದು, ನಮ್ಮ ದಾಖಲೆಯಲ್ಲಿ ತಪ್ಪಾಗಿ ನಮೂದಿಸಿರುವುದಾಗಿ ವೈದ್ಯಾಧಿಕಾರಿಗಳು ತಿಳಿಸಿರುವುದಾಗಿ ಮುಸ್ತಫಾ ಅವರು ಮಾಹಿತಿ ನೀಡಿದ್ದಾರೆ. 

ಈ ಬಗ್ಗೆ ಆಸ್ಪತ್ರೆ ಮೂಲಗಳಿಂದ ಇನ್ನಷ್ಟೇ ಪ್ರತಿಕ್ರಿಯೆ ಸಿಗಬೇಕಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News