×
Ad

ದ.ಕ. ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಹುಲಿವೇಶ ಕುಣಿತ ಕಾರ್ಯಕ್ರಮ

Update: 2021-10-15 10:33 IST

ಮಂಗಳೂರು : ದಸರಾ ಹಬ್ಬದ ಪ್ರಯುಕ್ತ ದ. ಕ. ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದ ಎದುರುಗಡೆ ಹುಲಿವೇಶ ಕುಣಿತ ಕಾರ್ಯಕ್ರಮ ಗುರುವಾರ ನಡೆಯಿತು.

ಜಿಲ್ಲೆಯ ಖ್ಯಾತ ಹುಲಿವೇಶ ತಂಡ ಮಂಗಳೂರು ಫ್ರೆಂಡ್ಸ್ ಟೈಗರ್ಸ್ ಇದರಲ್ಲಿ ಭಾಗವಹಿಸಿ, ಅವರಿಗೆ ಗೌರವಾರ್ಪಣೆಯನ್ನು ಕಾಂಗ್ರೆಸ್ ವತಿಯಿಂದ ಮಾಡಲಾಯಿತು.

ಜಿಲ್ಲಾ ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ರಮಾನಂದ ಪೂಜಾರಿ ಮತ್ತು ಮಂಗಳೂರು ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಎಸ್. ಕೆ. ಸವಾನ್ ಇದರ ನೇತೃತ್ವವನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಾಜಿ ಶಾಸಕ ಜೆ. ಆರ್. ಲೋಬೊ ರವರು, ಹುಲಿವೇಶ ಕೇವಲ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಸೀಮಿತವಲ್ಲ. ಈ ಸಂಸ್ಕೃತಿಯನ್ನು ಜಗತ್ತಿನೆಲ್ಲೆಡೆ ಪ್ರಖ್ಯಾತಿ ಮಾಡಲಾಗಿದೆ. ಇದಕ್ಕೆ ಧಾರ್ಮಿಕ ನೆಲೆಕಟ್ಟು ಇದೆ. ಇದು ಬಹಳ ಹಿಂದಿನಿಂದಲೂ ನಮ್ಮ ಜಿಲ್ಲೆಯಲ್ಲಿ ಬಂದಿದ್ದು, ಜನರು ಇದರಿಂದ ಆಕರ್ಷಿತರಾಗಿದ್ದಾರೆ. ಹುಲಿವೇಶ ಸಾಂಸ್ಕೃತಿಕ ಕಲೆಯಾಗಿದ್ದುಕೊಂಡು, ಜಿಲ್ಲೆಯ ವೈಭವಿಕರಣಕ್ಕೆ ಇದೊಂದು ಮೈಲಿ ಗಲ್ಲು ಆಗಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಎಐಸಿಸಿ ಕಾರ್ಯದರ್ಶಿ ಪಿ. ವಿ. ಮೋಹನ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಮಾಜಿ ಉಪ ಮೇಯರ್ ಮೊಹಮದ್ ಕುಂಜತ್ತಬೈಲ್, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ಟಿ. ಕೆ. ಸುಧೀರ್, ನೀರಜ್ ಪಾಲ್, ಗಣೇಶ್ ಪೂಜಾರಿ ಹಾಗೂ ಯುವ ಕಾಂಗ್ರೆಸ್ಸಿನ ಗೌತಮ್ ಬೋಳಾರ್, ನಾಗೇಂದ್ರ ಗೌಡ, ಕೌಶಿಕ್ ಅಮೀನ್, ನಿತಿನ್, ನೆಲ್ಸನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News