ಗಾರ್ಬಾ ಸಂಘರ್ಷ ಹಿನ್ನೆಲೆ: ಮಧ್ಯಪ್ರದೇಶದಲ್ಲಿ ಕೋಮುಗಲಭೆ

Update: 2021-10-15 05:46 GMT
ಸಾಂದರ್ಭಿಕ ಚಿತ್ರ (PTI)

ಭೋಪಾಲ್: ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಸೆಂಧ್ವಾ ಪಟ್ಟಣದಲ್ಲಿ ಕೋಮುಲಗಭೆ ಭುಗಿಲೆದ್ದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಬುಧವಾರ ರಾತ್ರಿ ಸೂಕ್ಷ್ಮ ಪ್ರದೇಶವಾದ ಮೋತಿಬಾಗ್ ಪ್ರದೇಶದಲ್ಲಿ ಗಾರ್ಬಾ ನೃತ್ಯ ವೇಳೆ ನಡೆದ ಸಂಘರ್ಷ ಕೋಮು ಗಲಭೆಯಾಗಿ ಪರಿವರ್ತನೆಯಾಗಿದ್ದು, ನಾಲ್ವರು ಪೊಲೀಸರು ಸೇರಿದಂತೆ 15 ಮಂದಿ ಹಿಂಸಾಚಾರದಲ್ಲಿ ಗಾಯಗೊಂಡಿದ್ದು, ಎರಡು ವಾಹನಗಳು ಜಖಂಗೊಂಡಿವೆ.

ಈ ಸಂಬಂಧ ಎರಡೂ ಕಡೆಯವರು ನೀಡಿದ ದೂರು ಸೇರಿದಂತೆ ಒಟ್ಟು ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ. ದಾಳಿ ಮತ್ತು ಪ್ರಾರ್ಥನಾ ಮಂದಿರಕ್ಕೆ ಹಾನಿಪಡಿಸುವುದನ್ನು ತಡೆದ ಪೊಲೀಸರ ಮೇಲೆ ದಾಳಿ ನಡೆಸಿದ ಸ್ಥಳೀಯರ ಗುಂಪಿನ ವಿರುದ್ಧವೂ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಒಟ್ಟು 20 ಮಂದಿಯನ್ನು ಬಂಧಿಸಲಾಗಿದೆ.

ಮೋತಿಬಾಗ್ ಪ್ರದೇಶದಲ್ಲಿ ನಡೆಯುತ್ತಿದ್ದ ಗಾರ್ಬಾ ಸಮಾರಂಭದಲ್ಲಿ ಇತರ ಸಮುದಾಯದ ಮಂದಿ ಹಾಜರಿದ್ದರು ಎಂಬ ಕಾರಣಕ್ಕೆ ಸಂಭವಿಸಿದ ಜಗಳದ ಹಿನ್ನೆಲೆಯಲ್ಲಿ ಹಿಂಸಾಚಾರ ಆರಂಭವಾಗಿತ್ತು ಎಂದು ಹೆಚ್ಚುವರಿ ಎಸ್ಪಿ ಆರ್.ಡಿ.ಪ್ರಜಾಪತಿ ಹೇಳಿದ್ದಾರೆ. ಎರಡೂ ಕಡೆಯವರು ಪರಸ್ಪರ ಸಂಘರ್ಷಕ್ಕೆ ಇಳಿದಾಗ ಘಟನೆ ಹಿಂಸಾತ್ಮಕ ಸ್ವರೂಪ ಪಡೆಯಿತು. ಘಟನೆಯಲ್ಲಿ ಮಹಿಳೆಯರು ಸೇರಿದಂತೆ  ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News