×
Ad

ಅಡ್ಡೂರಿನ ಶಿಕ್ಷಕ ಮುಹಮ್ಮದ್‌ಗೆ ‘ಶ್ರೀ ಗುರುಕುಲ ತಿಲಕ’ ಪುರಸ್ಕಾರ

Update: 2021-10-15 15:51 IST
ಮುಹಮ್ಮದ್‌

ಮಂಗಳೂರು, ಅ.15: ಎಲ್ಲಾ ಮಕ್ಕಳು ಕನಿಷ್ಠ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಹೊಂದುವಲ್ಲಿ ಉಚಿತ ಶಿಕ್ಷಕ ಸೇವೆಗೈದ ಗುರುಪುರ ಗ್ರಾಪಂ ವ್ಯಾಪ್ತಿಯ ಅಡ್ಡೂರು ಗ್ರಾಮದ ಕಾಂಜಿಲಕೋಡಿಯ ಶಿಕ್ಷಕ ಎಂ.ಎ. ಮುಹಮ್ಮದ್ ಕುಂಞಿ ಮಾಸ್ಟರ್ ಅವರನ್ನು ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆಯು ಪ್ರಸಕ್ತ ಸಾಲಿನ ಪ್ರತಿಷ್ಠಿತ ‘ಶ್ರೀ ಗುರುಕುಲ ತಿಲಕ’ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ವಾಮಂಜೂರಿನ ಸೈಂಟ್ ರೇಮಂಡ್ಸ್ ಓಪನ್ ಸ್ಕೂಲ್ ಮತ್ತು ಕಾಲೇಜಿನಿಂದ ಶಿಕ್ಷಕ ವೃತ್ತಿ ಜೀವನ ಆರಂಭಿಸಿರುವ ಇವರು ಚಿಕ್ಕಮಗಳೂರು, ಮೂಡಿಗೆರೆ, ಬೆಂಗಳೂರು, ಮಂಗಳೂರಿನ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕನಾಗಿ ಉಚಿತ ಸೇವೆಗೈದಿದ್ದಾರೆ.

ಊರಿನ ನಾಗರಿಕರು, ಜನಪ್ರತಿನಿಧಿಗಳ ಸಹಕಾರದಲ್ಲಿ 200ಕ್ಕೂ ಹೆಚ್ಚು ಮಕ್ಕಳು ಎಸೆಸೆಲ್ಸಿ ವಿದ್ಯಾಬ್ಯಾಸ ಮಾಡುವಲ್ಲಿ ಕೆಲಸ ಮಾಡಿದ್ದಾರೆ. ಶಾಲೆಯಿಂದ ಹೊರಗುಳಿದ ಹಾಗೂ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದ ಸುಮಾರು 320ರಷ್ಟು ಮಕ್ಕಳನ್ನು ಪುನಾ ಶಾಲೆಗಳಿಗೆ ದಾಖಲಾತಿ ಕೊಡಿಸಿದ್ದಾರೆ.

ಶಾಲಾ ವಿದ್ಯಾರ್ಥಿಗಳು ವ್ಯಸನಮುಕ್ತರಾಗಬೇಕೆನ್ನುವ ಕಾಳಜಿಯಿಂದ ಸುಮಾರು 68 ವಿದ್ಯಾರ್ಥಿಗಳ ತಂಡವೊಂದನ್ನು ಕಟ್ಟಿ ಕೊಂಡು ಬೆಂಗಳೂರು ಮತ್ತು ಮಂಗಳೂರಿನ ಆಯ್ದ ಕೆಲವು ಬಸ್ ನಿಲ್ದಾಣಗಳು, ಮಾರುಕಟ್ಟೆ, ಶಾಪಿಂಗ್ ಮಾಲ್, ಪಾರ್ಕ್, ಕೊಳೆಗೇರಿಗಲ್ಲಿ ಯಶಸ್ವಿಯಾಗಿ ಬೀದಿನಾಟಕ ಪ್ರದರ್ಶಿಸಿದ್ದಾರೆ. ಸಾಹಿತ್ಯಾಸಕ್ತಿ ಬೆಳೆಸಿಕೊಂಡಿರುವ ಇವರು ಈಗಾಗಲೇ ಹಲವು ಪುರಸ್ಕಾರ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News