×
Ad

ಕಲಾಕಾರ್ ಪುರಸ್ಕಾರಕ್ಕೆ ನಿಹಾಲ್ ತಾವ್ರೊ ಆಯ್ಕೆ

Update: 2021-10-15 16:17 IST

ಮಂಗಳೂರು, ಅ.15: ಕಾರ್ವಾಲ್ ಕುಟುಂಬ ಮತ್ತು ಮಾಂಡ್ ಸೊಭಾಣ್ ನೀಡುವ 17ನೇ ಕಲಾಕಾರ್ ಪುರಸ್ಕಾರಕ್ಕೆ ಪ್ರಸಿದ್ಧ ಗಾಯಕ ಹಾಗೂ ಸೋನಿ ಟಿವಿಯ ಇಂಡಿಯನ್ ಐಡಲ್ ರಿಯಾಲಿಟಿ ಶೋ ಇದರ ಅಂತಿಮ ಹಂತಕ್ಕೆ ತಲುಪಿದ (ಟಾಪ್ 5) ನಿಹಾಲ್ ಹ್ಯಾನ್ಸನ್ ತಾವ್ರೊ, ಅಲಂಗಾರ್ ಅವರನ್ನು ಆಯ್ಕೆ ಮಾಡಲಾಗಿದೆ.

ಪುರಸ್ಕಾರವು 25,000 ರೂ. ನಗದು, ಸ್ಮರಣಿಕೆ, ಸನ್ಮಾನ ಪತ್ರ ಒಳಗೊಂಡಿದೆ. ನಿಹಾಲ್ ತಾವ್ರೊ ಗಾಯನ ಕ್ಷೇತ್ರದ ಅದ್ಭುತ ಪ್ರತಿಭೆಯಾಗಿದ್ದು ತನ್ನ ಮಧುರ ಕಂಠದಿಂದ ನೂರಾರು ಹಾಡುಗಳಿಗೆ ಜೀವ ತುಂಬಿದ್ದಾರೆ. 25 ಧ್ವನಿಸುರುಳಿಗಳು, 12 ಸಿನೆಮಾಗಳು, 6 ಟಿವಿ ರಿಯಾಲಿಟಿ ಶೋ-ಗಳು, 15 ಸಂಗೀತ ರಸಮಂಜರಿಗಳು, 6 ಧಾರವಾಹಿಗಳ ಶೀರ್ಷಕ ಗೀತೆಗಳು ಮತ್ತು 200ಕ್ಕೂ ಅಧಿಕ ಇತರೆ ಕಾರ್ಯಕ್ರಮಗಳಲ್ಲಿ ತಮ್ಮ ಗಾನಸುಧೆ ಹರಿಸಿದ್ದಾರೆ.

ನವೆಂಬರ್ 7ರಂದು ಸಂಜೆ 6ಗಂಟೆಗೆ ಶಕ್ತಿನಗರದ ಕಲಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾಹಿತಿ ಜಯಂತ ಕಾಯ್ಕಿಣಿ ಪುರಸ್ಕಾರ ಪ್ರದಾನ ಮಾಡುವರು.

ಕಾರ್ಯಕ್ರಮದ ಬಳಿಕ ತಿಂಗಳ ವೇದಿಕೆ ಸರಣಿಯ 239ನೇ ಕಾರ್ಯಕ್ರಮವಾಗಿ ಮಾಂಡ್ ನಾಟಕ ತಂಡದಿಂದ ಶೇಕ್ಸ್ ಪಿಯರ್ ರಚಿತ ‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’ ಪ್ರದರ್ಶನಗೊಳ್ಳಲಿದೆ. ಅರುಣ್ ರಾಜ್ ರಾಡ್ರಿಗಸ್ ಇದನ್ನು ಕೊಂಕಣಿಗೆ ಅನುವಾದಿಸಿದ್ದು, ವಿದ್ದು ಉಚ್ಚಿಲ್ ನಿರ್ದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News