×
Ad

ಮಂಗಳೂರು; ಅಮಾಯಕ ಕೇರಳಿಗನ ವಿರುದ್ಧ ಮತಾಂತರ ಪುಸ್ತಕ ಹಂಚುವ ಆರೋಪ ಹೊರಿಸಿದ ಬಜರಂಗದಳ ಕಾರ್ಯಕರ್ತರು

Update: 2021-10-15 18:52 IST

ಮಂಗಳೂರು, ಅ.15: ಹಿಂದೂ ವಿರೋಧಿ ಪುಸ್ತಕಗಳನ್ನು ಹಂಚುತ್ತಿದ್ದಾನೆಂದು ಕೇರಳ ಮೂಲದ ಅಮಾಯಕ ವ್ಯಕ್ತಿಯ ಮೇಲೆ ಬಜರಂಗದಳ ಕಾರ್ಯಕರ್ತರು ಗಂಭೀರ ಆರೋಪ ಹೊರಿಸಿದ ಘಟನೆ ನಗರದ ಪಾಂಡೇಶ್ವರದಲ್ಲಿ ಶುಕ್ರವಾರ ನಡೆದಿದೆ.

ಪಾಂಡೇಶ್ವರದ ಕೇರಳ ಮೂಲದ ಶಾಲೆಯೊಂದರ ಸಮೀಪ ಕೇರಳ ಕೊಟ್ಟಾಯಂ ನಿವಾಸಿ ರಾಜೇಯನ್ ಪುಸ್ತಕಗಳ ಬ್ಯಾಗ್ ಹಿಡಿದುಕೊಂಡು ಹೋಗುತ್ತಿದ್ದರು. ಈ ವೇಳೆ ಸ್ಥಳಕ್ಕೆ ಧಾವಿಸಿದ ಬಜರಂಗದಳ ಕಾರ್ಯಕರ್ತರು ಅಮಾಯಕನ ಮೇಲೆ ವಿನಾಕಾರಣ ಆರೋಪ ಹೊರಿಸಿ ದಾಂಧಲೆ ನಡೆಸಲು ಮುಂದಾಗಿದ್ದರು. ಸ್ಥಳಕ್ಕೆ ಪಾಂಡೇಶ್ವರ ಪೊಲೀಸರು ಆಗಮಿಸಿದಾಗ ಬಜರಂಗದಳದವರು ವ್ಯಕ್ತಿಯನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.

ಈ ವೇಳೆ ಪುಸ್ತಕಗಳನ್ನು ಒಳಗೊಂಡ ಬ್ಯಾಗ್‌ಗಳು ಸಹಿತ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ದರು. ವ್ಯಕ್ತಿಯನ್ನು ಕೂಲಂಕಷವಾಗಿ ವಿಚಾರಣೆ ನಡೆಸಿದಾಗ ಆತ ಅಮಾಯಕ ಎನ್ನುವುದು ಬಹಿರಂಗವಾಯಿತು. ಕೊನೆಗೆ ಪೊಲೀಸರು ಆತನನ್ನು ಠಾಣೆಯಿಂದ ಕಳಿಸಿದರು ಎಂದು ತಿಳಿದು ಬಂದಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News