‘ಶ್ರೀಮಧ್ವಾಚಾರ್ಯ ಜಯಂತಿ ಸರಕಾರಿ ಆಚರಣೆಯಾಗಲಿ’
Update: 2021-10-15 20:02 IST
ಉಡುಪಿ, ಅ.15: ಕರ್ನಾಟಕದ ದಾರ್ಶನಿಕರಲ್ಲಿ ಒಬ್ಬರಾದ ಶ್ರೀಮಧ್ವಾಚಾರ್ಯರ ಜಯಂತಿಯನ್ನು ಸರಕಾರಿ ಆಚರಣೆಯಾಗಿ ಆಚರಿಸುವಂತೆ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶತೀರ್ಥರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಭಾರತದ ಅನೇಕ ದಾರ್ಶನಿಕರಲ್ಲಿ, ಅದರಲ್ಲೂ ಆಚಾರ್ಯತ್ರಯರಲ್ಲಿ ಓರ್ವರೆನಿಸಿ ಕನ್ನಡದ ನೆಲದಲ್ಲಿ ಅವತರಿಸಿ, ಸರಳ ಭಕ್ತಿ ಸಿದ್ಧಾಂತವನ್ನು ಪ್ರತಿಪಾದಿಸಿ, ಕನ್ನಡದ ನೆಲದಲ್ಲಿ ಹರಿದಾಸ ಸಾಹಿತ್ಯ ಸಮೃದ್ಧವಾಗಿ ಬೆಳೆಯಲು ಕಾರಣರಾಗಿ ಉಡುಪಿಯಲ್ಲಿ ಶ್ರೀ ಕೃಷ್ಣ ನನ್ನು ಪ್ರತಿಷ್ಠಾಪಿಸಿ ನಾಡಿನ ಕೀರ್ತಿಯನ್ನು ಬೆಳಗಿದ ಜಗದ್ಗುರು ಶ್ರೀಮಧ್ವಾಚಾರ್ಯರ ಜಯಂತಿಯನ್ನು ಸರಕಾರ ಆಚರಿಸುವಂತಾಗಬೇಕು ಎಂದು ಪಲಿಮಾರುಶ್ರೀಗಳು ಒತ್ತಾಯಿಸಿದ್ದಾರೆ.
ಸರಕಾರ ಅನೇಕ ಮಹಾತ್ಮರ ಜಯಂತಿ, ಪುಣ್ಯತಿಥಿಗಳನ್ನು ಆಚರಿಸುವಂತೆ ಮಧ್ವ ಜಯಂತಿಯನ್ನೂ ಆಚರಿಸಬೇಕು ಎಂದು ಶ್ರೀಗಳು ಆಗ್ರಹಿಸಿದ್ದಾರೆ.