ಉಡುಪಿಯ ಜಾಮಿಯಾ ಮಸೀದಿಯಲ್ಲಿ ಡ್ರಗ್ಸ್ ವಿರುದ್ಧ ಕಳವಳ ವ್ಯಕ್ತಪಡಿಸಿ ಜುಮಾ ಖುತ್ಬಾ

Update: 2021-10-15 17:09 GMT

ಉಡುಪಿ : ಜಾಮಿಯಾ ಮಸೀದಿ ಉಡುಪಿಯಲ್ಲಿ ಇಂದು ನಡೆದ ಜುಮಾ ಖುತ್ಬಾ (ಪ್ರವಚನ) ದಲ್ಲಿ ಅಲ್ ಇಬಾದಾಹ್ ಇಂಡಿಯನ್ ಸ್ಕೂಲ್ ನ ಸಂಸ್ಥಾಪಕ ಮೌಲಾನಾ ಅಬ್ದುಲ್ ಲತೀಫ್ ಮದನಿ ಅವರು ಯುವಜನತೆ ಡ್ರಗ್ಸ್ ಅಡಿಕ್ಟ್ ಆಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಪ್ರವಾದಿ ಅವರ ಕಾಲದಿಂದಲೂ ಇಸ್ಲಾಮ್ ನಲ್ಲಿ ನಶೆಯ ವಿರುದ್ಧ ಎಚ್ಚರಿಕೆಯ ಸಂದೇಶಗಳನ್ನು ಕಾಣಬಹುದು. ನಶೆಯ ಹಲವಾರು ಆಯಾಮಗಳಿದ್ದು ಇಂದು ಅದು ಮಾರ್ಪಡಿಸಿದ ರೀತಿಯಲ್ಲಿ ಆಕರ್ಷಕ ಹೆಸರಿನೊಂದಿಗೆ ಯುವ ಜನತೆಯನ್ನು ದಾರಿಗೆಡಿಸಿದೆ. ನೈತಿಕ ಮೌಲ್ಯಗಳ ಮೇರೆ ಮೀರುವ, ನೈಸರ್ಗಿಕತೆಯಿಂದ ಅನೈಸರ್ಗಿಕತೆಗೆ ದೂಡುವ ಸೇವನೆಗಳನ್ನು ಇಸ್ಲಾಮ್ ನಿರ್ಬಂಧಿಸಿದೆ.  ಸಮಸ್ಯೆಗಳನ್ನು ಎದುರಿಸಲಾಗದೆ ಸಮಸ್ಯೆಗಳಿಂದ ಪಾರಾಗುವ ನೆಪದಿಂದ ಮನ ಮಸ್ತಿಷ್ಕವನ್ನು ಪ್ರಚೋದಿಸುವ ಸೇವನೆಗಳಿಗೆ ಯುವಜನತೆ ಬಲಿಯಾಗುತ್ತಿರುವುದು ಕಳವಳಕಾರಿಯಾಗಿದೆ. ಇದರ ವಿರುದ್ಧ ಸಾಮಾಜಿಕ ಸೇವಾ ಸಂಘಟನೆಗಳು, ಮಸೀದಿ ಜಮಾಅತ್ ಗಳು, ಯುವ ವೇದಿಕೆಗಳು ಕಟಿಬದ್ಧರಾಗಬೇಕೆಂದು ಅವರು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News