ಅ.17: 'ಸ್ಯಾಮ್‌ಸಂಗ್‌ ಸ್ಮಾರ್ಟ್‌ಪ್ಲಾಝಾ ಮಂಗಳೂರು ಡಿಜಿಟಲ್ ಮ್ಯಾಟ್ರಿಕ್ಸ್' ಉದ್ಘಾಟನೆ

Update: 2021-10-15 17:32 GMT

ಮಂಗಳೂರು: ಗೃಹೋಪಯೋಗಿ ವಸ್ತುಗಳ ವಿತರಣೆಯಲ್ಲಿ ಎರಡು ದಶಕಗಳ ಅನುಭವ ಹೊಂದಿದ ಮಂಗಳೂರು ಡಿಜಿಟಲ್ ಮ್ಯಾಟ್ರಿಕ್ಸ್‌ ಸಂಸ್ಥೆಯ ನೂತನ "ಸ್ಯಾಮ್‌ಸಂಗ್‌ ಸ್ಮಾರ್ಟ್‌ ಪ್ಲಾಝಾ ಮಂಗಳೂರು ಡಿಜಿಟಲ್ ಮ್ಯಾಟ್ರಿಕ್ಸ್" ಮಳಿಗೆಯು ನಗರದ ಫಳ್ನೀರ್‌ ರಸ್ತೆಯ ಅಥೆನಾ ಕಾಂಪ್ಲೆಕ್ಸ್‌ನಲ್ಲಿ ಅ.17ರಂದು ಬೆಳಗ್ಗೆ 10:30ಕ್ಕೆ ಉದ್ಘಾಟನೆಯಾಗಲಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಯೆನೆಪೊಯ ವಿಶ್ವವಿದ್ಯಾಲಯದ ಕುಲಪತಿ ವೈ. ಅಬ್ದುಲ್ಲಾ ಕುಂಞಿ, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಎಚ್.ಎಚ್. ಕಂಪೆನಿಯ ಅಧ್ಯಕ್ಷ ಕುಂಞಿ ಅಹ್ಮದ್, ಕರುಣಾ ಇನ್‌ಫ್ರಾ ಪ್ರಾಪರ್ಟೀಸ್‌ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕ ವಿ.ಕರುಣಾಕರನ್, ಅಥೆನಾ ಆಸ್ಪತ್ರೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ‌ ನಿರ್ದೇಶಕ ಆರ್.ಎಸ್. ಶೆಟ್ಟಿಯಾನ್, ಮನಪಾ ಸದಸ್ಯ ನವೀನ್ ಡಿಸೋಜ, ಎಸ್‌ಎಂಆರ್ ಗ್ರೂಪ್‌ನ ಅಧ್ಯಕ್ಷ ಎಸ್.ಎಂ.ಆರ್. ರಶೀದ್ ಹಾಜಿ, ಅಟೆಲೈರ್‌ನ ವ್ಯವಸ್ಥಾಪಕ ನಿರ್ದೇಶಕ ಎಂ.ಮುಹಮ್ಮದ್ ಬಾವ ಭಾಗವಹಿಸಲಿದ್ದಾರೆ ಎಂದು ಮಂಗಳೂರು ಡಿಜಿಟಲ್ ಮ್ಯಾಟ್ರಿಕ್ಸ್‌ನ ಆಡಳಿತ ನಿರ್ದೇಶಕ ಬಿ. ಬಶೀರ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News