ಐಎಎಸ್ 58ನೇ ರ‍್ಯಾಂಕ್ ಗಳಿಸಿದ ಫೈಝಾನ್ ಅಹ್ಮದ್ ರಿಗೆ 'ಏಸ್' ಐಎಎಸ್ ವತಿಯಿಂದ ಸನ್ಮಾನ

Update: 2021-10-16 12:18 GMT

ಮಂಗಳೂರು : ತಮ್ಮ ಸ್ವ ಸಾಮರ್ಥ್ಯದ ಮೇಲೆ ಅಚಲವಾದ ನಂಬಿಕೆಯನ್ನು ಹೊಂದಿಕೊಂಡು, ಬದ್ಧತೆ ಮತ್ತು ಸಮರ್ಪಣೆಯೊಂದಿಗೆ ನಿರಂತರ ವಾಗಿ ಪ್ರಯತ್ನಪಟ್ಟರೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಖಂಡಿತ ಯಶಸ್ಸನ್ನು ಸಾಧಿಸಬಹುದು ಎಂದು ಇತ್ತೀಚಿಗೆ ಐಎಎಸ್ ಪರೀಕ್ಷೆಯಲ್ಲಿ ಯಶಸ್ಸನ್ನು ಗಳಿಸಿದ ಫೈಝಾನ್ ಅಹ್ಮದ್ ಅವರು ನಗರದ 'ಏಸ್' ಐಎಎಸ್ ಅಕಾಡಮಿಯ ವತಿಯಿಂದ ಸನ್ಮಾನ ಸ್ವೀಕರಿಸಿ ಸಂಸ್ಥೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ನಗರದ ಎಂ.ಜಿ ರಸ್ತೆಯಲ್ಲಿರುವ 'ಏಸ್' ಐಎಎಸ್ ಸಂಸ್ಥೆಯು 2020ರಲ್ಲಿ ಯುಪಿಎಸ್ಸಿ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ 58ನೇ ರ‍್ಯಾಂಕ್ ಗಳಿಸಿದ ಫೈಝಾನ್ ಅಹ್ಮದ್ ಅವರಿಗೆ  ಸಂಸ್ಥೆಯ ಕಾರ್ಯಾಲಯದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿತ್ತು.

ನ್ಯಾಯವಾದಿ ಸಾದುದ್ದೀನ್ ಸಾಲಿಹಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಫೈಝಾನ್ ಅಹ್ಮದ್ ಅವರಿಗೆ ಸಂಸ್ಥೆಯ  ಟ್ರಸ್ಟಿಗಳು  ಸನ್ಮಾನ ಪತ್ರ ಮತ್ತು ಉಡುಗೊರೆಯೊಂದಿಗೆ ಶಾಲು ಹೊದೆಸಿ ಸನ್ಮಾನ ಮಾಡಿದರು.

ರಫೀಕ್ ಮಾಸ್ಟರ್ ಅವರು ಫೈಝಾನ್ ಅಹ್ಮದ್ ರ ಸಾಧನೆಯನ್ನು ವಿವರಿಸಿ, ಸನ್ಮಾನ ಪತ್ರ ವಾಚಿಸಿದರು. ಇದೇ ಸಂದರ್ಭ ಯುಪಿಎಸ್ಸಿ ಪರೀಕ್ಷೆಯ ಕೊನೆಯ ಹಂತದ ಸಂದರ್ಶನದವರೆಗೆ ತಲುಪಿದ 'ಏಸ್' ಐಎಎಸ್ ವಿದ್ಯಾರ್ಥಿಯಾದ ಮುಹಮ್ಮದ್ ಇಶ್ರತ್ ರನ್ನು  ಸನ್ಮಾನಿಸಲಾಯಿತು.

ಸಂಸ್ಥೆಯ ನಿರ್ದೇಶಕರಾದ ನಝೀರ್ ಅಹ್ಮದ್ ಅವರು 'ಏಸ್' ಐಎಎಸ್ ಅಕಾಡಮಿಯಲ್ಲಿ ತರಬೇತಿ ಪಡೆದು ಯಶಸ್ವಿಗಳಿಸಿ ಸರಕಾರಿ ಉದ್ಯೋಗದಲ್ಲಿರುವ  ಸಂಸ್ಥೆಯ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಅಬೂಬಕರ್ ಸಿದ್ದೀಕ್, ಬಿ.ಎಸ್. ಮುಹಮ್ಮದ್ ಬಶೀರ್, ನೌಷದ್ ಅಹ್ಮದ್ ಹಾಗು ಇತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ಇಮ್ತಿಯಾಝ್ ಖತೀಬ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News