‘ಬುದ್ದನ ಜಡ್ಡಿಗೆ ನಮ್ಮ ನಡಿಗೆ’ ಮಹಿಷಾ ದಸರಾ ಕಾರ್ಯಕ್ರಮ

Update: 2021-10-16 13:54 GMT

ಕುಂದಾಪುರ, ಅ.16: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆ) ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಬುದ್ದನ ಜಡ್ಡಿಗೆ ನಮ್ಮ ನಡಿಗೆ ಮಹಿಷಾ ದಸರಾ ಕಾರ್ಯಕ್ರಮವನ್ನು ಕರ್ಕುಂಜೆ ಗ್ರಾಪಂ ವ್ಯಾಪ್ತಿಯ ಬುದ್ದನ ಜಡ್ಡಿನಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು.

ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಐತಿಹಾಸಿಕ ಕುರುಹುಗಳು ಪತ್ತೆಯಾದ ಬುದ್ದನ ಜಡ್ಡುವಿನಲ್ಲಿ ನಡೆದ ಈ ಅದ್ದೂರಿ ಕಾರ್ಯಕ್ರಮಕ್ಕೆ ಅಂಬೇಡ್ಕರ್ ಭಾವಚಿತ್ರಕ್ಕೆ ಹಿರಿಯ ಚಿಂತಕ ನಾರಾಯಣ ಮಣೂರು ಹಾಗೂ ಗೋಪಾಲಕೃಷ್ಣ ಮಾಲಾರ್ಪಾಣೆ ಮಾಡುವ ಮೂಲಕ ಚಾಲನೆ ನೀಡಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಉದಯ್ ಕುಮಾರ್ ತಲ್ಲೂರು ಪ್ರಾಸ್ತಾವಿಕ ಮಾತಾಡಿದರು. ಬೌದ ಧರ್ಮ ಉಪನ್ಯಾಸಕ ಶಂಭು ಮಾಸ್ತಾರ್ ಹಾಗೂ ಗೋಪಾಲಕೃಷ್ಣ ಕುಂದಾಪುರ ಬುದ್ದ ವಂದನೆ ಮಾಡಿ ಪಂಚ ಶೀಲಾ ಮತ್ತು ತ್ರೀಸರಣ ಬೋಧಿಸಿದರು. ಹಿರಿಯ ಚಿಂತಕ ನಾರಾಯಣ ಮಣೂರು, ಬುದ್ದ ಚರಿತೆ ಹಾಗೂ ಅಂಬೇಡ್ಕರ್ ಜೀವನ ಚರಿತ್ರೆಯನ್ನು ವಿವರಿಸಿದರು. ವಸಂತ ವಂಡ್ಸೆ ಬುದ್ದ ಗೀತೆಯನ್ನು ಪ್ರಸ್ತುತ ಪಡಿಸಿದರು.

ಸಂಘಟನೆಯ ಮುಖಂಡರಾದ ಕೆ.ಎಸ್.ವಿಜಯ್, ಮಂಜುನಾಥ ಗುಡ್ಡೆ ಯಂಗಡಿ, ರಾಮ ಮೈಯಾಡಿ, ರಮೇಶ್ ಶೀರೂರು ರಾಘವೇಂದ್ರ ಶೀರೂರು, ಸುರೇಶ್ ಬಾಬು, ರಾಜು ಮಾಸ್ಟರ ಬೀಜಾಡಿ, ಗ್ರಾಪಂ ಮಾಜಿ ಸದಸ್ಯರಾದ ಮಂಜುನಾಥ ಬುದ್ದನ ಜಡ್ಡು, ಸುಖಾನಂದ ತಲ್ಲೂರು, ಸಚಿನ್ ಕುಂದಾಪುರ, ಸತ್ಯ ನಾರಾಯಣ ಬೆಳ್ಳಲಾ, ಸಂಜೀವಾ ಕೊಡ್ಲಾಡಿ, ಅರುಣಾ ಕೊಡ್ಲಾಡಿ, ರಾಮ ಬೆಳ್ಳಾಲ, ಚಂದ್ರಿಕಾ ಬೆಳ್ಳಾಲ, ಜ್ಯೋತಿ ತಲ್ಲೂರು, ಅರುಣ್ ಹಾಗೂ ಉದಯ್ ತಲ್ಲೂರು ಮೊದಲಾದವರು ಉಪಸ್ಥಿತರಿದ್ದರು. ಚಂದ್ರಮ ತಲ್ಲೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News