ದ.ಕ. ಜಿಲ್ಲೆ : 34 ಮಂದಿಗೆ ಕೊರೋನ ಸೋಂಕು
Update: 2021-10-16 14:48 GMT
ಮಂಗಳೂರು, ಅ.16: ದ.ಕ. ಜಿಲ್ಲೆಯಲ್ಲಿ 34 ಮಂದಿಗೆ ಕೊರೋನ ಸೋಂಕು ತಗುಲಿದೆ. ಯಾವುದೇ ಸಾವು ಪ್ರಕರಣ ವರದಿಯಾಗಿಲ್ಲ.
ಜಿಲ್ಲೆಯಲ್ಲಿ 53 ಮಂದಿ ಗುಣಮುಖರಾಗಿದ್ದು, ಶೇ.0.45 ಪಾಸಿಟಿವಿಟಿ ದರ ದಾಖಲಾಗಿದೆ. ಜಿಲ್ಲೆಯ 1,15,064 ಸೋಂಕಿತರ ಪೈಕಿ 1,13,049 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್ಗೆ ಇಲ್ಲಿಯವರೆಗೆ 1,675 ಮಂದಿ ಮೃತಪಟ್ಟಿದ್ದಾರೆ. 340 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.