ಅಂಬಲಪಾಡಿ: ಎರಡು ಮನೆಗಳಿಗೆ ನುಗ್ಗಿ ಕಳವು

Update: 2021-10-16 16:05 GMT

ಉಡುಪಿ, ಅ.16: ಅಂಬಲಪಾಡಿಯಲ್ಲಿ ಅ.15ರಂದು ರಾತ್ರಿ ವೇಳೆ ಎರಡು ಮನೆಗಳಿಗೆ ನುಗ್ಗಿದ ಕಳ್ಳರು ಅಪಾರ ಮೌಲ್ಯದ ಸೊತ್ತು ಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಅಂಬಲಪಾಡಿ ಕುಂಜಿಗುಡ್ಡೆಯ ಯಶವಂತ್ ಶೆಟ್ಟಿ ಎಂಬವರ ಮನೆಯ ಹಿಂಬಾಗಿಲನ್ನು ಜೋರಾಗಿ ತಳ್ಳಿ ಒಳನುಗ್ಗಿದ ಕಳ್ಳರು, ಕಾಪಾಟಿನಲ್ಲಿದ್ದ 2 ಚಿನ್ನದ ಸರಗಳು, 3 ಚಿನ್ನದ ಉಂಗುರಗಳು, 2 ಬಳೆಗಳು, 2 ಮಕ್ಕಳ ದೃಷ್ಟಿ ಬಳೆಗಳು, 6 ಜೊತೆ ಕಿವಿ ಓಲೆ ಸೇರಿದಂತೆ ಒಟ್ಟು 45 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ. ಇವುಗಳ ವುೌಲ್ಯ 1,80,000ರೂ. ಅಂದಾಜಿಸಲಾಗಿದೆ.

ಅದೇ ರೀತಿ ಇದೇ ಸಮಯಕ್ಕೆ ಅಂಬಲಪಾಡಿಯ ಗುಣಲತಾ ಶೆಟ್ಟಿ ಎಂಬವರ ಮನೆಯ ಹೆಂಚು ತೆಗೆದು ಒಳನುಗ್ಗಿದ ಕಳ್ಳರು, ಕಾಪಾಟಿನಲ್ಲಿದ್ದ 5000ರೂ. ನಗದು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News