ಅ.19: ಪುನರ್ ನವೀಕರಣಗೊಂಡ ಅಮೆಮಾರ್ ಮಸೀದಿ ಉದ್ಘಾಟನೆ, ಮಿಲಾದ್ ಆಚರಣೆ

Update: 2021-10-16 17:16 GMT

ಫರಂಗಿಪೇಟೆ : ಪುನರ್ ನವೀಕರಣಗೊಂಡ ಬದ್ರಿಯಾ ಜುಮಾ ಮಸೀದಿ ಅಮೆಮಾರ್ ಇದರ ಉದ್ಘಾಟನಾ ಕಾರ್ಯಕ್ರಮ ಮತ್ತು ಮಿಲಾದ್ ಆಚರಣೆ  ಅ.19 ರಂದು ನಡೆಯಲಿದೆ.

ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಉಮರಬ್ಬ ಅವರು ಬೆಳಗ್ಗೆ 8 ಗೆಂಟೆಗೆ ದ್ವಜಾರೋಹಣ ಮಾಡಲಿದ್ದಾರೆ. 10:30ಕ್ಕೆ ನವೀಕರಣಗೊಂಡ ಮಸೀದಿಯನ್ನು ದಕ ಜಿಲ್ಲಾ ಖಾಝಿ ತ್ವಾಖಾ ಅಹಮದ್ ಮುಸ್ಲಿಯಾರ್ ಉದ್ಘಾಟನೆ ಮಾಡಲಿದ್ದಾರೆ. 11 ಗೆಂಟೆಗೆ ಮೌಲೂದು ಪಾರಾಯಣ ಮತ್ತು ಮಧ್ಯಾಹ್ನ 2 ಗೆಂಟೆಯವರೆಗೆ ಅನ್ನದಾನ ನಡೆಯಲಿದೆ.

ಸಂಜೆ 4:30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಸೀದಿಯ ಅಧ್ಯಕ್ಷ ಉಮರಬ್ಬ ಅಧ್ಯಕ್ಷತೆ ವಹಿಸಲಿದ್ದಾರೆ, ಖತೀಬ್ ಅಬ್ದುಲ್ ಲೆತಿಫ್ ಹನೀಫಿ ದುವಾ ಆಶೀರ್ವಚನ ನೀಡಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಸಾಮಾಜಿಕ ಮುಖಂಡರಾದ ರಫೀಕ್ ಮಾಸ್ಟರ್ ಮತ್ತು ಅಖಿಲ ಭಾರತ ಬ್ಯಾರಿ ಮಹಾಸಭಾ ಅಧ್ಯಕ್ಷ ಅಝೀಝ್ ಬೈಕಂಪಾಡಿ, ಪುದು ಗ್ರಾ. ಪಂ ಅಧ್ಯಕ್ಷ ರಮಳಾನ್ ಮಾರಿಪ್ಪಳ್ಳ ಭಾಗವಹಿಸಲಿದ್ದಾರೆ ಹಾಗೂ ಸಂಜೆ 7:30ಕ್ಕೆ ಮಜ್ಲಿಸ್ ನ್ನೂರು, ರಾತ್ರಿ 9 ಗೆಂಟೆಗೆ ಝುಬೈರ್ ದಾರಿಮಿ ಪವಾಲ್ ರವರಿಂದ ಪ್ರವಚನ ನಡೆಯಲಿದೆ ಎಂದು ಮಸೀದಿ ಪ್ರ. ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News