ಮಂಗಳೂರು ದಸರಾ ಉತ್ಸವಕ್ಕೆ ಸಂಭ್ರಮದ ತೆರೆ

Update: 2021-10-16 18:06 GMT

ಮಂಗಳೂರು, ಅ.16: ಕುದ್ರೋಳಿ ಶ್ರೀಗೋಕರ್ಣ ಕ್ಷೇತ್ರದಲ್ಲಿ ನವರಾತ್ರಿಯ ಸಂದರ್ಭದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲ್ಪಟ್ಟ ನವದುರ್ಗೆ, ಶಾರದಾ ಮೂರ್ತಿಯ ಜಲಸ್ತಂಭದೊಂದಿಗೆ ಆರಂಭಗೊಂಡ ಉತ್ಸವದ ಸಮಾಪನ ಕಾರ್ಯ ದೇವಳದ ಪುಷ್ಕರಣಿಯಲ್ಲಿ ಶುಕ್ರವಾರ ಸಂಜೆಯಿಂದ ಶನಿವಾರ ಮುಂಜಾನೆ ಸುಮಾರು 3:30 ರವರೆಗೂ ಉತ್ಸಾಹಿ ಭಕ್ತರ ಸಮ್ಮುಖದಲ್ಲಿ ನಡೆಯಿತು.

ಇಂದು ಸಂಜೆ ದೇವಸ್ಥಾನದ ವಠಾರದಲ್ಲಿ ಭಜನೆ ಮತ್ತು ಗುರುಪೂಜೆಯೊಂದಿಗೆ ದಸರಾ ಉತ್ಸವಕ್ಕೆ ವಿದ್ಯುಕ್ತ ತೆರೆ ಬಿದ್ದಿದೆ. ಕೊರೋನ ನಿಯಮಾವಳಿಯ ಹಿನ್ನೆಲೆಯಲ್ಲಿ ಸಾಕಷ್ಟು ನಿರ್ಬಂಧಗಳಿರೂ ಕೊರೋನ ತೀವ್ರತೆ ಇಳಿಮುಖವಾಗಿದ್ದ ಹಿನ್ನೆಲೆಯಲ್ಲಿ ದೊಡ್ಡ ಸಂಖ್ಯೆಯ ಜನಸ್ತೋಮ ಕುದ್ರೋಳಿ, ಮಂಗಳಾದೇವಿ ಸೇರಿದಂತೆ ವಿವಿಧ ಕಡೆ ಕಂಡು ಬಂತು.

ಮಂಗಳೂರು ದಸರಾ ಮೆರವಣೆಗೆ ನಗರದಲ್ಲಿ ನಡೆಯದಿದ್ದರೂ ಶ್ರೀಕ್ಷೇತ್ರ ಕುದ್ರೋಳಿಯ ಗೋಕರ್ಣ ನಾಥ ದೇವಾಲದ ಆವರಣ ದಲ್ಲಿ ಉತ್ಸವದ ಬಲಿ ನಡೆದು ದೇವಳದ ಪುಷ್ಕರಣಿಯಲ್ಲಿ ಉತ್ಸವ ಮೂರ್ತಿಗಳ ಜಲಸ್ತಂಭನ ನಡೆಯಿತು. ಮಂಗಳಾದೇವಿಯಲ್ಲಿ ಮಹಾನವಮಿಯ ಸಂದರ್ಭದಲ್ಲಿ ನಡೆಯುವ ಮಹಾ ರಥೋತ್ಸವ ಮತ್ತು ದೇವರ ಜಲಕದೊಂದಿಗೆ ಸಂಪನ್ನಗೊಂಡಿದೆ.

ನಗರದ ರಥ ಬೀದಿಯ ಆಚಾರ್ಯ ಮಠದ ಶ್ರೀಶಾರದಾ ಮಹೋತ್ಸವದ 99ನೇ ವರ್ಷದ ಕಾರ್ಯಕ್ರಮಗಳನ್ನು ಎಂದಿನಂತೆ ಮಂಗಳೂರು ರಥಬೀದಿಯಲ್ಲಿರುವ ಶ್ರೀವೆಂಕಟರಮಣ ದೇವಳದ ಆಚಾರ್ಯ ಮಠದ ವಸಂತ ಮಂಟಪದಲ್ಲಿ ಧಾರ್ಮಿಕ ಕಾರ್ಯ ಕ್ರಮದೊಂದಿಗೆ ಇಂದು ಶ್ರೀಮಹಾಮಾಯಾ ತೀರ್ಥದಲ್ಲಿ ಶ್ರೀಶಾರದಾ ಮಾತೆಯ ವಿಗ್ರಹದ ಜಲಸ್ತಂಭನದೊಂದಿಗೆ ಉತ್ಸವ ಸಂಪನ್ನಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News