ಹಸಿಕಸ ನಿರ್ವಹಣೆ: ಮಂಗಳೂರು ಮಹಾನಗರ ಪಾಲಿಕೆಗೆ ರಾಜ್ಯದಲ್ಲೇ ದ್ವಿತೀಯ ಸ್ಥಾನ

Update: 2021-10-16 18:09 GMT

ಮಂಗಳೂರು, ಅ.16: ಸಿಟಿ ಮ್ಯಾನೇಜರ್ಸ್ ಅಸೋಸಿಯೇಶನ್ ಕರ್ನಾಟಕ (ಸಿಮ್ಯಾಕ್) ಮತ್ತು ಪೌರಾಡಳಿತ ನಿರ್ದೇಶನಾಲ ಯದ ಸಹಯೋಗದಲ್ಲಿ ಜರುಗಿದ ಪ್ರಶಸ್ತಿ ಸಮಾರಂಭದಲ್ಲಿ ಮನೆ ಮನೆಗಳಲ್ಲಿ ಹಸಿ ಕಸ ನಿರ್ವಾಹಣೆಯ ಕುರಿತು ದ್ವಿತೀಯ ಸ್ಥಾನದ ಪ್ರಶಸ್ತಿಯನ್ನು ಮಂಗಳೂರು ಮಹಾನಗರ ಪಾಲಿಕೆ ತನ್ನದಾಗಿಸಿಕೊಂಡಿದ್ದು, ಸದ್ರಿ ಪ್ರಶಸ್ತಿಯನ್ನು ಮಹಾನಗರಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್ ಅವರು ಮೇಯರ್ ಪ್ರೇಮಾನಂದ ಶೆಟ್ಟಿಯವರಿಗೆ ಹಸ್ತಾಂತರಿಸಿದ್ದಾರೆ.

ಪ್ರಶಸ್ತಿಯು ಫಲಕ ಮತ್ತು ಪ್ರಮಾಣ ಪತ್ರ ಹಾಗೂ ನಗದು ಪುರಸ್ಕಾರ 75,000 ರೂ. ಹೊಂದಿದೆ. ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಸ್ಕರಣೆಯನ್ನು ವೈಜ್ಞಾನಿಕವಾಗಿ ನಡೆಸುತ್ತಿದ್ದು, ಸಾರ್ವಜನಿಕರು ಕಸ ವಿಂಗಡಣೆ ಮಾಡಿ ನೀಡುವುದರಿಂದ ಪಚ್ಚನಾಡಿಯ ಘನತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಸಂಸ್ಕರಣ ಕಾರ್ಯವು ಸುಲಭವಾಗಿ ನೆರವೇರುತ್ತಿದೆ. ಅಲ್ಲದೇ ಕಸ ಶೇಖರಣೆ ಯಲ್ಲಿನ ಇಳಿತದಿಂದ ತ್ಯಾಜ್ಯವು ಲ್ಯಾಂಡ್ ಫಿಲ್ ಸೈಟ್‌ಗೆ ಹೋಗದೆ ನೇರವಾಗಿ ಘನತ್ಯಾಜ್ಯ ಘಟಕಕ್ಕೆ ತಲುಪಿಸಿ ತ್ಯಾಜ್ಯ ಸಂಸ್ಕ ರಣೆಯನ್ನು ಮಡಲಾಗಿದ್ದು, ಈ ನಿಟ್ಟಿನಲ್ಲಿ ಸಿಮ್ಯಾಕ್ ಸಂಸ್ಥೆಯು ಮಂಗಳೂರು ಮಹಾನಗರಪಾಲಿಕೆಗೆ ಸದ್ರಿ ಪ್ರಶಸ್ತಿ ನೀಡಿದೆ.

ಮಂಗಳೂರು ಮಹಾನಗರದ ಎಲ್ಲಾ ಸಾರ್ವಜನಿಕರಿಗೆ ಮತ್ತು ಸದ್ರಿ ಕಸ ನಿರ್ವಹಣೆಯನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಲು ಮಹಾನಗರ ಪಾಲಿಕೆಯೊಂದಿಗೆ ಸಹಕರಿಸಿದ ಶ್ರೀ ರಾಮಕೃಷ್ಣ ಮಠ, ಮಂಗಳಾದೇವಿ, ಇದರ ಎಲ್ಲಾ ಪದಾಧಿಕಾರಿ ಗಳಿಗೆ ಹಾಗೂ ಸ್ವಯಂ ಸೇವರಿಗೆ ಮನಪಾ ಧನ್ಯವಾದ ಸಲ್ಲಿಸಿದೆ. ಮಹಾನಗರಪಾಲಿಕೆಯ ಸಚೇತಕ ಸುಧೀರ್ ಶೆಟ್ಟಿ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸಂದೀಪ್, ನಗರಯೋಜನ ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ ಬೊಳ್ಳಾಜೆ ಪಾಲಿಕೆಯ ಆರೋಗ್ಯ ಅಧಿಕಾರಿ ಮಂಜಯ್ಯ ಶೆಟ್ಟಿ, ಪರಿಸರ ಅಭಿಯಂತರರಾದ ದೀಪ್ತಿ ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News