​ನಾಲ್ಕು ವರ್ಷದ ಜೈಲುವಾಸ ಬಳಿಕ ಬಿಡುಗಡೆಯಾದ ಶಶಿಕಲಾ ಅಳಿಯ

Update: 2021-10-17 05:46 GMT

ಬೆಂಗಳೂರು: ಅಕ್ರಮ ಸಂಪತ್ತು ಪ್ರಕರಣದಲ್ಲಿ ನಾಲ್ಕು ವರ್ಷದ ಜೈಲು ಶಿಕ್ಷೆಗೆ ಗುರಿಯಾದ, ಎಐಎಡಿಎಂಕೆಯ ಉಚ್ಚಾಟಿತ ನಾಯಕಿ ವಿ.ಕೆ. ಶಶಿಕಲಾ ಅವರ ಅಳಿಯ ವಿ.ಎನ್.ಸುಧಾಕರನ್ ಅವರನ್ನು ಶನಿವಾರ ಬೆಂಗಳೂರು ಕೇಂದ್ರೀಯ ಕಾರಾಗೃಹ ದಿಂದ ಬಿಡುಗಡೆ ಮಾಡಲಾಗಿದೆ.

ಪರಪ್ಪನ ಅಗ್ರಹಾರ ಜೈಲಿನ ಹೊರಗೆ ಕಾದಿದ್ದ ಅವರ ವಕೀಲರು ಸುಧಾಕರ್ ಅವರನ್ನು ಬರ ಮಾಡಿಕೊಂಡರು. ಬಿಡುಗಡೆಯಾದ ತಕ್ಷಣ ಸುಧಾಕರನ್ ಚೆನ್ನೈಗೆ ತೆರಳಿದರು ಎಂದು ಮೂಲಗಳು ಹೇಳಿವೆ.

ಅಕ್ರಮ ಸಂಪತ್ತು ಪ್ರಕರಣದಲ್ಲಿ ಬಿಡುಗಡೆಯಾದ ಕೊನೆಯ ಆರೋಪಿ ಇವರಾಗಿದ್ದಾರೆ. ಶಶಿಕಲಾ ಹಾಗೂ ಆಕೆಯ ಅತ್ತಿಗೆ ಇಳವರಸಿ ಕೂಡಾ ಈ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದರು. ಶಶಿಕಲಾಗೆ 10 ಕೋಟಿ ರೂ. ದಂಡ ವಿಧಿಸಲಾಗಿತ್ತು. ಶಶಿಕಲಾ ಜನವರಿ 27ರಂದು ಹಾಗೂ ಇಳವರಸಿ ಫೆ. 5ರಂದು ಬಿಡುಗಡೆಯಾಗಿದ್ದರು.

ಆದರೆ ದಂಡ ಮೊತ್ತವನ್ನು ಪಾವತಿಸದ ಕಾರಣ ಸುಧಾಕರನ್ ಶಿಕ್ಷೆಯನ್ನು ವಿಸ್ತರಿಸಲಾಗಿತ್ತು. ದಂಡ ಪಾವತಿಸದಿದ್ದರೆ ಒಂದು ವರ್ಷ ಕಠಿಣ ಶಿಕ್ಷೆ ವಿಸ್ತರಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು. 2016ರ ಡಿಸೆಂಬರ್ 5ರಂದು ಮೃತಪಟ್ಟ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News