ಸ್ಯಾಮ್‌ಸಂಗ್ ಸ್ಮಾರ್ಟ್ ಪ್ಲಾಝಾ ಮಂಗಳೂರು ಡಿಜಿಟಲ್ ಮ್ಯಾಟ್ರಿಕ್ಸ್ ಶುಭಾರಂಭ
ಮಂಗಳೂರು, ಅ.17: ನಗರದ ಫಳ್ನೀರ್ ರಸ್ತೆಯ ಮಲಬಾರ್ ಗೋಲ್ಡ್ ಮುಂಭಾಗದ ಅಥೆನಾ ಕಾಂಪ್ಲೆಕ್ಸ್‌ನಲ್ಲಿ ತೆರೆಯಲ್ಪಟ್ಟ ಇಲೆಕ್ಟ್ರಾನಿಕ್ಸ್ ಸಾಮಗ್ರಿಗಳ ಹೊಸ ಮಳಿಗೆ ಸ್ಯಾಮ್‌ಸಂಗ್ ಸ್ಮಾರ್ಟ್‌ಪ್ಲಾಝಾ ಮಂಗಳೂರು ಡಿಜಿಟಲ್ ಮ್ಯಾಟ್ರಿಕ್ಸ್ ರವಿವಾರ ಶುಭಾರಂಭಗೊಂಡಿತು.
ಯೆನೆಪೊಯ ಯುನಿವರ್ಸಿಟಿಯ ಕುಲಪತಿ ವೈ. ಅಬ್ದುಲ್ಲಾ ಕುಂಞಿ 'ಸ್ಯಾಮ್‌ಸಂಗ್ ಸ್ಮಾರ್ಟ್ ಫ್ಲಾಝಾ'ವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಗ್ರಾಹಕರಿಗೆ ಸಂತೃಪ್ತಿಯ ಸೇವೆ ಮೂಲಕ ಕಳೆದ 20 ವರ್ಷದಿಂದ ಮನೆಮಾತಾಗಿರುವ ಗ್ರೂಫ್ 4 ಮತ್ತು ಅಟ್ಲೈರ್ ಸಂಸ್ಥೆಯು ತೆರೆದಿರುವ ಈ ಇಲೆಕ್ಟ್ರಾನಿಕ್ಸ್ ಮಳಿಗೆಯು ಯಶಸ್ಸು ಸಾಧಿಸಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ ಬೆಂಗಳೂರಿನ ಬಳಿಕ ರಾಜ್ಯದಲ್ಲಿ ಮಂಗಳೂರು ಬೆಳೆಯುವ ನಗರವಾಗಿ ಗುರುತಿಸಲ್ಪಟ್ಟಿದೆ. ಜಿಲ್ಲೆಯ ಗ್ರಾಮೀಣ ಭಾಗದ ಜನರು ನಗರಕ್ಕೆ ಆಕರ್ಷಿತರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆಕರ್ಷಕ ಮಳಿಗೆಗಳು ತೆರೆಯಲ್ಪಡುವುದು ಕೂಡ ನಗರದ ಬೆಳವಣಿಗೆಗೆ ಪೂರಕವಾಗಿರುತ್ತದೆ. ಇಂದು ತೆರೆಯಲ್ಪಟ್ಟ ಈ ಶೋರೂಮ್ ಗ್ರಾಹಕರ ಪ್ರೀತಿ, ವಿಶ್ವಾಸಕ್ಕೆ ಪಾತ್ರವಾಗಲಿ ಎಂದು ಹೇಳಿದರು.
ಸ್ಥಳೀಯ ಕಾರ್ಪೊರೇಟರ್ ನವೀನ್ ಡಿಸೋಜ ಮಾತನಾಡಿ ಜಿಲ್ಲೆಯಲ್ಲದೆ, ಹೊರ ಜಿಲ್ಲೆ ಮತ್ತು ಪಕ್ಕದ ಕೇರಳದ ರಾಜ್ಯದ ಜನರು ಕೂಡ ಈ ಭಾಗದ ವಸತಿ ಮತ್ತು ವಾಣಿಜ್ಯ ಸಮುಚ್ಚಯಗಳಿಗೆ ಆಗಾಗ ಭೇಟಿ ನೀಡುತ್ತಲಿದ್ದಾರೆ. ನನ್ನ ವಾರ್ಡ್ ವ್ಯಾಪ್ತಿಯಲ್ಲಿ ತೆರೆಯಲ್ಪಟ್ಟ ಈ ಶೋರೂಮ್ ಗ್ರಾಹಕರಿಗೆ ಸಂತೃಪ್ತಿಯ ಸೇವೆ ನೀಡಲಿ ಎಂದರು.
ಮುಖ್ಯ ಅತಿಥಿಯಾಗಿ ಅಥೆನಾ ಆಸ್ಪತ್ರೆಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಆರ್.ಎಸ್. ಶೆಟ್ಟಿಯಾನ್, ಎಸ್‌ಎಂಆರ್ ಗ್ರೂಪ್‌ನ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ಕರುಣಾ ಇನ್ಫ್ರಾ ಪ್ರಾಪರ್ಟಿಸ್ (ಪ್ರೆ.ಲಿ,)ನ ಆಡಳಿತ ನಿರ್ದೇಶಕ ವಿ. ಕರುಣಾಕರನ್, ಅಟ್ಲೈರ್‌ನ ಆಡಳಿತ ನಿರ್ದೇಶಕ ಬಿ.ಎ. ಮುಹಮ್ಮದ್ ಬಾವಾ, ಅಬ್ದುಲ್ಲಾ ಸಿದ್ದೀಕ್, ಸ್ಯಾಮ್‌ಸಂಗ್ ಕಂಪೆನಿಯ ವಲಯ ವ್ಯವಸ್ಥಾಪಕ ಸೌರವ್ ಪ್ರಧಾನ್, ಶಾಖಾ ವ್ಯವಸ್ಥಾಪಕ ರಾಘವೇಂದ್ರ ಶೇಟ್ ಭಾಗವಹಿಸಿದ್ದರು.
ಸ್ಯಾಮ್‌ಸಂಗ್ ಸ್ಮಾರ್ಟ್ ಪ್ಲಾಝಾದ ಆಡಳಿತ ನಿರ್ದೇಶಕ ಬಿ. ಬಶೀರ್, ಆಡಳಿತ ಪಾಲುದಾರರಾದ ಅಬ್ದುಲ್ ರಝಾಕ್ ಮತ್ತು ಸಲೀಂ ಉಪಸ್ಥಿತರಿದ್ದರು.
ಹಾಫಿಝ್ ಮುಹಮ್ಮದ್ ಶಮಾಕ್ ಕಿರಾಅತ್ ಪಠಿಸಿದರು. . ಸ್ಯಾಮ್ ಸಂಗ್ ಸ್ಮಾರ್ಟ್ ಪ್ಲಾಝಾದ ಆಡಳಿತ ಪಾಲುದಾರ ಬಾಸಮ್ ಎ.ಕೆ. ಸ್ವಾಗತಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
ಸ್ಯಾಮ್‌ಸಂಗ್ ಸ್ಮಾರ್ಟ್ ಪ್ಲಾಝಾದಲ್ಲಿ ವಿವಿಧ ಬ್ರಾಂಡ್‌ನ ಮೊಬೈಲ್, ಟಿವಿ, ಫ್ರಿಡ್ಜ್, ವಾಶಿಂಗ್ ಮೆಶಿನ್, ಏರ್ ಕಂಡೀಶನ್, ಟ್ಯಾಬ್ ಮತ್ತಿತರ ಇಲೆಕ್ಟ್ರಾನಿಕ್ಸ್ ಸಾಮಗ್ರಿಗಳಿವೆ. ಗ್ರಾಹಕರಿಗೆ ಆಕರ್ಷಕ ಕೊಡುಗೆಗಳನ್ನು ನೀಡಲಾಗಿದ್ದು, ಝೀರೋ ಡೌನ್ ಪೇಮೆಂಟ್ ಹಾಗೂ ಮಾಸಿಕ ಕಂತುಗಳ ಸೌಲಭ್ಯವನ್ನೂ ಕಲ್ಪಿಸಲಾಗಿದೆ.