ಪಂಜಾಬಿನ 13 ಸಮಸ್ಯೆಗಳ ಕುರಿತು ಸೋನಿಯಾ ಗಾಂಧಿಗೆ ಪತ್ರ ಬರೆದ ನವಜೋತ್ ಸಿಂಗ್ ಸಿಧು

Update: 2021-10-17 08:34 GMT

ಚಂಡಿಗಡ: ಪಂಜಾಬ್ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯ ಪಕ್ಷದ ಪ್ರಚಾರಕ್ಕಾಗಿ 13 ಅಂಶಗಳ ಕಾರ್ಯಸೂಚಿಯನ್ನು ಮಂಡಿಸಲು ಸಭೆ ನಡೆಸುವಂತೆ ಕೋರಿದರು.

“ಪಂಜಾಬ್‌ನ ಪುನರುತ್ಥಾನ ಹಾಗೂ ತ್ತು ಉದ್ಧಾರಕ್ಕಾಗಿ ಇದು  ಕೊನೆಯ ಅವಕಾಶ" ಎಂದು ಹೇಳಿದ ಸಿಧು, ಸೋನಿಯಾ ಗಾಂಧಿಯವರೊಂದಿಗೆ ವೈಯಕ್ತಿಕ ಭೇಟಿಯನ್ನು ಕೋರಿದರು.

ಅಕ್ಟೋಬರ್ 15 ರ ದಿನಾಂಕದ ಪತ್ರವನ್ನು ಇಂದು ಸಿಧು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.  ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ  ಕೆ. ಸಿ. ವೇಣುಗೋಪಾಲ್ ಅವರನ್ನು ಭೇಟಿಯಾಗಿ  ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಹಿಂಪಡೆದು "ಎಲ್ಲವನ್ನೂ ಬಗೆಹರಿಸಲಾಗಿದೆ" ಎಂದು ಹೇಳಿದ ಮರುದಿನ ಸಿಧು ಪತ್ರ ಬರೆದಿದ್ದಾರೆ.

ಸಿಧು ಅವರ 13 ಅಂಶಗಳ ಅಜೆಂಡಾದಲ್ಲಿಅಪಚಾರ ಪ್ರಕರಣಗಳಲ್ಲಿ ನ್ಯಾಯ, ಪಂಜಾಬ್‌ನ ಮಾದಕ ದ್ರವ್ಯಗಳ ಕಾಟ, ಕೃಷಿ ಸಮಸ್ಯೆಗಳು, ಉದ್ಯೋಗಾವಕಾಶಗಳು, ಮರಳು ಗಣಿಗಾರಿಕೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣವೂ ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News