×
Ad

ಬಾಂಗ್ಲಾದೇಶದ ರಾಜತಾಂತ್ರಿಕ ಕಚೇರಿಗಳ ಸುರಕ್ಷತೆ |ಭಾರತೀಯ ರಾಯಭಾರಿಯನ್ನು ಕರೆಸಿ ಕಳವಳ ವ್ಯಕ್ತಪಡಿಸಿದ ಢಾಕಾ ಸರಕಾರ

Update: 2025-12-23 20:30 IST

 ಪ್ರಣಯ ವರ್ಮಾ | Photo Credit ; PTI  

ಹೊಸದಿಲ್ಲಿ,ಡಿ.23: ಹಲವಾರು ನಗರಗಳಲ್ಲಿ ಸರಣಿ ಪ್ರತಿಭಟನೆಗಳು ಮತ್ತು ಕಾನ್ಸುಲರ್ ಸೇವೆಗಳ ಸ್ಥಗಿತದ ನಡುವೆ ಬಾಂಗ್ಲಾದೇಶದ ಸರಕಾರವು ಮಂಗಳವಾರ ಭಾರತೀಯ ರಾಯಭಾರಿ ಪ್ರಣಯ ವರ್ಮಾ ಅವರನ್ನು ಕರೆಸಿಕೊಂಡು ಭಾರತದಲ್ಲಿರುವ ತನ್ನ ರಾಜತಾಂತ್ರಿಕ ಕಚೇರಿಗಳ ಸುರಕ್ಷತೆ ಕುರಿತು ಔಪಚಾರಿಕವಾಗಿ ಕಳವಳಗಳನ್ನು ವ್ಯಕ್ತಪಡಿಸಿದೆ.

ಬಾಂಗ್ಲಾದೇಶದ ವಿದೇಶಾಂಗ ಕಾರ್ಯದರ್ಶಿ ಅಸದ್ ಆಲಂ ಸಿಯಾಮ್ ಅವರು ಬೆಳಿಗ್ಗೆ ವರ್ಮಾರನ್ನು ಕರೆಸಿಕೊಂಡು ಹೊಸದಿಲ್ಲಿ, ಕೋಲ್ಕತಾ ಮತ್ತು ಅಗರ್ತಲಾಗಳಲ್ಲಿಯ ರಾಜತಾಂತ್ರಿಕ ಕಚೇರಿಗಳಲ್ಲಿ ‘ಅತೃಪ್ತಿಕರ ಭದ್ರತಾ ಸ್ಥಿತಿ’ಯ ಕುರಿತು ವಿವರಿಸಿದರು ಎಂದು ವಿದೇಶಾಂಗ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಇತ್ತೀಚಿನ ಘಟನೆಗಳ ಕುರಿತು ಬಾಂಗ್ಲಾದೇಶದ ಗಂಭೀರ ಕಳವಳಗಳನ್ನು ವ್ಯಕ್ತಪಡಿಸಿದ ವಿದೇಶಾಂಗ ಕಾರ್ಯದರ್ಶಿಗಳು, ವಿಯೆನ್ನಾ ನಿರ್ಣಯದಡಿ ರಾಜತಾಂತ್ರಿಕ ಕಚೇರಿಗಳ ಸಂಪೂರ್ಣ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವ ಆತಿಥೇಯ ರಾಷ್ಟ್ರದ ಹೊಣೆಗಾರಿಕೆಯನ್ನು ಒತ್ತಿ ಹೇಳಿದರು ಎಂದು ಮೂಲಗಳು ತಿಳಿಸಿವೆ.

ಹೊಸದಿಲ್ಲಿಯಲ್ಲಿಯ ಬಾಂಗ್ಲಾದೇಶ ರಾಯಭಾರ ಕಚೇರಿಯು ಸೋಮವಾರ ‘ಅನಿವಾರ್ಯ ಸಂದರ್ಭಗಳನ್ನು’ ಉಲ್ಲೇಖಿಸಿ ಭಾರತೀಯ ಪ್ರಜೆಗಳಿಗೆ ಎಲ್ಲ ವೀಸಾ ಮತ್ತು ಕಾನ್ಸುಲರ್ ಸೇವೆಗಳನ್ನು ಸ್ಥಗಿತಗೊಳಿಸಿದೆ. ರಾಯಭಾರ ಕಚೇರಿಯ ಆವರಣದಲ್ಲಿ ಪ್ರದರ್ಶಿಸಿರುವ ನೋಟಿಸ್‌ನಲ್ಲಿ ಮುಂದಿನ ಸೂಚನೆಯವರೆಗೂ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಲಾಗಿದ್ದು,ಉಂಟಾಗಿರುವ ಯಾವುದೇ ಅನಾನುಕೂಲತೆಗೆ ವಿಷಾದವನ್ನು ವ್ಯಕ್ತಪಡಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News