ಪುತ್ತೂರು : ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ ಕೋಳಿ ಸಾಗಾಟದ ಲಾರಿ ಪಲ್ಟಿ

Update: 2021-10-17 08:33 GMT

ಪುತ್ತೂರು: ಕೋಳಿ ಸಾಗಾಟ ಮಾಡುತ್ತಿದ್ದ ಲಾರಿಯೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ ಪಲ್ಟಿಯಾದ ಘಟನೆ ರವಿವಾರ ಬೆಳಗ್ಗೆ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ  ಪುತ್ತೂರು ನಗರದ ತೆಂಕಿಲ ಬೈಪಾಸ್  ರಸ್ತೆಯಲ್ಲಿ ನಡೆದಿದೆ.

ಅಪಘಾತದಿಂದ ಲಾರಿ ಚಾಲಕ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತೆಂಕಿಲ ಬೈಪಾಸ್ ತಿರುವಿನಲ್ಲಿ‌ ಚಾಲಕನ ನಿಯಂತ್ರಣ ತಪ್ಪಿದ ವಾಹನ ವಿದ್ಯುತ್  ಕಂಬಕ್ಕೆ ಢಿಕ್ಕಿಯಾಗಿ ಬಳಿಕ ಉರುಳಿ ಬಿದ್ದಿತ್ತು.  ಇದರಿಂದಾಗಿ ಲಾರಿಯಲ್ಲಿದ್ದ ಕೆಲವು ಕೋಳಿಗಳು ಸತ್ತಿದ್ದು, ಜೀವಂತ ಕೋಳಿಗಳೆಲ್ಲ ರಸ್ತೆಯಲ್ಲಿ ತುಂಬಿ ಹೋಗಿದ್ದವು.

ಅಪಘಾತದಲ್ಲಿ ವಿದ್ಯುತ್ ಕಂಬ ಮುರಿದ ಕಾರಣ ಪುತ್ತೂರಿನ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಪುತ್ತೂರು ಮೆಸ್ಕಾಂ ಸಿಬ್ಬಂದಿ ಹಾಗೂ ಟ್ರಾಫಿಕ್ ಪೊಲೀಸರು ಅಪಘಾತ ನಡೆದ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News