×
Ad

ಸಿಪಿಐಎಂ ಅಕ್ಷರ ದಾಸೋಹ ನೌಕರರ ಶಾಖಾ ಸಮ್ಮೇಳನ

Update: 2021-10-17 15:51 IST

ಬೈಂದೂರು, ಅ.17: ಕೇರಳದಲ್ಲಿ ನಡೆಯಲಿರುವ ಸಿಪಿಐಎಂ ಪಕ್ಷದ ಅಖಿಲ ಭಾರತ ಮಹಾ ಅಧಿವೇಶನದ ಪೂರ್ವಭಾವಿಯಾಗಿ ಬೈಂದೂರು ವಲಯ ವ್ಯಾಪ್ತಿಯ ಸಿಪಿಐಎಂ ಪಕ್ಷದ ಅಕ್ಷರ ದಾಸೋಹ ನೌಕರರ ಶಾಖಾ ಸಮ್ಮೇಳನವು ಶನಿವಾರ ಸಿಪಿಐಎಂ ಬೈಂದೂರು ವಲಯ ಕಚೇರಿಯಲ್ಲಿ ಜರಗಿತು.

ಸಮ್ಮೇಳನವನ್ನು ಉದ್ಘಾಟಿಸಿದ ಸಿಪಿಐಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವೆಂಕಟೇಶ್ ಕೋಣಿ ಮಾತನಾಡಿ, ದುಡಿಯುವ ವರ್ಗವಾದ ರೈತ, ಕಾರ್ಮಿಕರ ಪಕ್ಷವಾಗಿರುವ ಸಿಪಿಐಎಂನ್ನು ತಳಮಟ್ಟದಿಂದ ಕಟ್ಟಲು ಶೋಷಿತ ವರ್ಗದ ದುಡಿಯುವ ಜನರ ಬಲಿಷ್ಟ ಹೋರಾಟ, ಚಳುವಳಿಯನ್ನು ಸಂಘಟಿಸಲು ನಾವೆಲ್ಲರೂ ಮುಂದಾಗಬೇಕು ಎಂದು ಹೇಳಿದರು.

ಪಕ್ಷದ ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ್ ಮಾತನಾಡಿ, ಅ.31ರಂದು ಗುಲ್ವಾಡಿಯಲ್ಲಿ ಜರಗುವ ಸಿಪಿಐಎಂ ಪಕ್ಷದ ಬೈಂದೂರು ವಲಯದ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಶಾರದಾ ಶಿರೂರು ಶ್ರದ್ಧಾಂಜಲಿ ಠರಾವು ಮಂಡಿಸಿದರು ಶಾಖಾ ಕಾರ್ಯ ದರ್ಶಿ ಸಿಂಗಾರಿ ನಾವುಂದ ವರದಿ ಮಂಡಿಸಿದರು. ಹಿರಿಯ ಸದಸ್ಯೆ ಶಾರದಾ ಬೈಂದೂರು ಧ್ವಜಾರೋಹಣ ನೆರವೇರಿಸಿದರು. ಸಿಪಿಐಎಂ ಪಕ್ಷದ ಮುಖಂಡ ರಾದ ಜಯಶ್ರೀ ಪಡುವರಿ, ರೋನಾಲ್ಡ್ ರಾಜೇಶ್ ಕ್ವಾಡ್ರಸ್, ಸುಶೀಲ ಸಾಲಿಮಕ್ಕಿ ಬಿಜೂರು, ಸಾವಿತ್ರಿ ಹೆಮ್ಮಾಡಿ, ಸರಸ್ವತಿ ಬೈಂದೂರು ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News