×
Ad

ಮಂಗಳೂರು: ನಮ್ಮ ನಾಡ ಒಕ್ಕೂಟದಿಂದ ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ ತರಬೇತಿ ಕಾರ್ಯಾಗಾರ

Update: 2021-10-17 17:37 IST

ಮಂಗಳೂರು, ಅ 17, ನಮ್ಮ ನಾಡ ಒಕ್ಕೂಟ ಮಂಗಳೂರು ಘಟಕ ಮತ್ತು ಮುಸ್ಲಿಂ ಇಂಡಸ್ಟ್ರಿಯಲಿಸ್ಟ್ಸ್ ಅಸೋಸಿಯೇಶನ್ ಬೆಂಗಳೂರು ಇದರ ಜಂಟಿ ಆಶ್ರಯದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ ಉಚಿತ ತರಬೇತಿ ಕಾರ್ಯಾಗಾರವು ನಗರದ ಬಿಕರ್ನಕಟ್ಟೆಯಲ್ಲಿರುವ ಮಸೂದ್ ಕಾಲೇಜ್ ಆಫ್ ನರ್ಸಿಂಗ್ ಸಂಸ್ಥೆಯಲ್ಲಿ ಇತ್ತೀಚೆಗೆ ನಡೆಯಿತು.

ಮುಸ್ಲಿಮ್ ಇಂಡಸ್ಟ್ರಿಯಲಿಸ್ಟ್ಸ್ ಅಸೋಸಿಯೇಶನ್‌ನ ಮ್ಯಾನೇಜಿಂಗ್ ಕೌನ್ಸಿಲ್ ಸದಸ್ಯ ತನ್ವೀರ್ ಅಹ್ಮದ್ ಮತ್ತು ಬೆಂಗಳೂರಿನ ಫಾರ್ಚರ್ ಅಕಾಡಮಿಯ ನಿರ್ದೇಶಕ ಶುಹೈಬ್ ವಲೈ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ತರಬೇತಿ ನೀಡಿದರು.

ನಮ್ಮ ನಾಡು ಒಕ್ಕೂಟ ಜಿಲ್ಲಾ ಕಾರ್ಯದರ್ಶಿ ರಫೀಕ್ ಮಾಸ್ಟರ್ ವಿದ್ಯಾರ್ಥಿಗಳಿಗೆ ಪ್ರೇರಣಾ ತರಗತಿ ನಡೆಸಿದರು.

ಡಿಜಿಟಲ್ ಮಾರ್ಕೆಟಿಂಗ್ ಎಂದರೇನು? ಇದರ ಮೂಲಕ ಹೇಗೆ ವ್ಯಾಪಾರವನ್ನು ವಿಸ್ತರಿಸಬಹುದು ? ಮನೆಯಲ್ಲೇ ಕುಳಿತು ಹೇಗೆ ಗಳಿಕೆಯನ್ನು ಮಾಡಬಹುದು ? ಡಿಜಿಟಲ್ ಮಾರ್ಕೆಟಿಂಗ್ ಮೂಲಕ ಇರುವ ಸಂಪಾದನೆಯ ಅವಕಾಶಗಳು ಯಾವುವು ? ಇತ್ಯಾದಿ ವಿಷಯಗಳ ಬಗ್ಗೆ ತರಬೇತಿ ನೀಡಲಾಯಿತು.

ಬಳಿಕ ನಡೆದ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಂಗಳೂರಿನ ಸುಲ್ತಾನ್ ಬಿಲ್ಡರ್ಸ್ ಆಡಳಿತ ನಿರ್ದೇಶಕ ಮುಹಮ್ಮದ್ ಯು.ಬಿ, ನಮ್ಮ ನಾಡ ಒಕ್ಕೂಟದ ಕೇಂದ್ರ ಸಮಿತಿಯ ಕೋಶಾಧಿಕಾರಿ ಅಬ್ದುಲ್ ಹಮೀದ್ ಮೂಡುಬಿದಿರೆ, ಟ್ರಸ್ಟಿ ಖಲೀಲ್ ಕುದ್ರೋಳಿ, ಸಲಹೆಗಾರ ಸುಲೈಮಾನ್ ಶೇಖ್ ಬೆಳುವಾಯಿ, ಸದಸ್ಯರಾದ ಮಕ್ಬೂಲ್ ಕುದ್ರೋಳಿ, ಯಕೀನುಲ್ಲಾ ಬಜ್ಪೆ, ಬಂಟ್ವಾಳ ಘಟಕದ ಅಧ್ಯಕ್ಷ ಪಿ.ಎ. ರಹೀಂ, ಮಂಗಳೂರು ಘಟಕದ ಅಧ್ಯಕ್ಷ ರಾಝಿಕ್ ಅಲಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಡ್ವೇಟ್ ಶೇಖ್ ಇಸಾಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News