ಬೈಕಂಪಾಡಿ-ಅಂಗರಗುಂಡಿಯ ಮಸೀದಿ ರಸ್ತೆ ಕಾಂಕ್ರೀಟಿಕರಣಕ್ಕೆ ಶಿಲಾನ್ಯಾಸ
ಬೈಕಂಪಾಡಿ, ಅ.17: ಬೈಕಂಪಾಡಿಯಿಂದ ಅಂಗರಗುಂಡಿಯ ಮಸೀದಿಗೆ ಹೋಗುವ ಮುಖ್ಯ ರಸ್ತೆಯ ಕಾಂಕ್ರೀಟಿಕರಣಕ್ಕೆ ಶಾಸಕ ಭರತ್ ಶೆಟ್ಟಿ ವೈ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನಗರದ ಮೂಲಸೌಕರ್ಯಗಳಿಗಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಸಹಕಾರದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನ 1.25 ಕೋ.ರೂ ಬಿಡುಗಡೆಯಾಗಿದೆ. ಸರಕಾರದ ವಿವಿಧ ಇಲಾಖೆಗಳಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ಅನುದಾನವಿದೆ. ಪ್ರಮುಖ ಸ್ಥಳಗಳನ್ನು ಗುರುತಿಸಿ ಬಹು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು.
ಕೈಗಾರಿಕಾ ಪ್ರದೇಶ ದಾಟಲು ಕೆಳಸೇತುವೆ ಹಾಗೂ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಎನ್‌ಎಂಪಿಟಿ ಜತೆ ಸಭೆ ನಡೆಸಲಾಗಿದೆ. ನೂತನ ಮೇಲ್ಸೇತುವೆ ಆದಲ್ಲಿ ಈಗಿರುವ ರಸ್ತೆಯನ್ನು ಪರ್ಯಾಯವಾಗಿ ಬಳಸಲು ಚಿಂತನೆ ನಡೆದಿದೆ ಎಂದರು.
ಅಲ್ಪಸಂಖ್ಯಾತರ ಅಭಿವದ್ಧಿ ನಿಗಮದ ಮಾಜಿ ಅಧ್ಯಕ್ಷ ಅಬೂಬಕರ್ ಎನ್.ಬಿ, ಮನಪಾ ಸದಸ್ಯರಾದ ಸುಮಿತ್ರ ಕೆ, ಶ್ವೇತಾ ಪೂಜಾರಿ, ನಯನ ಆರ್.ಕೋಟ್ಯಾನ್, ವರುಣ್ ಚೌಟ, ರಾಜೇಶ್ ಸಾಲಿಯಾನ್ ಬೈಕಂಪಾಡಿ, ಬಿಜೆಪಿ ಮಂಡಲ ಉಪಾಧ್ಯಕ್ಷ ವಿಠ್ಠಲ್ ಸಾಲಿಯಾನ್, ಉಸ್ಮಾನ್ ಎನ್‌ಬಿ, ಬೂತ್ ಅಧ್ಯಕ್ಷ ಮುಹಮ್ಮದ್ ಇಸಾಕ್, ಬಾಲಕಷ್ಣ ಶೆಟ್ಟಿ, ಗುತ್ತಿನಾರ್ ಸುಭಾಷ್ ಶೆಟ್ಟಿ, ಗುತ್ತಿಗೆದಾರರಾದ ಮುಹಮ್ಮದ್ ತನ್ಸ್ಿ,ಸಲೀಮ್ ಮಲಿಕ್ ಮತ್ತಿತರರು ಉಪಸ್ಥಿತರಿದ್ದರು.