×
Ad

ಆಯುಧ ಪೂಜೆಗೆ ಕಾಪು ಠಾಣೆ ಸಿಬ್ಬಂದಿಗಳಿಂದ ಕೇಸರಿ ವಸ್ತ್ರ; ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ವೈರಲ್, ವ್ಯಾಪಾಕ ಆಕ್ರೋಶ

Update: 2021-10-17 21:27 IST

ಕಾಪು, ಅ.17: ಕಳೆದ ವಾರ ನವರಾತ್ರಿಯ ಪ್ರಯುಕ್ತ ಕಾಪು ಪೊಲೀಸ್ ಠಾಣೆಯಲ್ಲಿ ನಡೆದ ಆಯುಧ ಪೂಜೆಯಲ್ಲಿ ಪೊಲೀಸರು ಕೇಸರಿ ವಸ್ತ್ರ ಧರಿಸಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ನವರಾತ್ರಿ ಹಿನ್ನೆಲೆಯಲ್ಲಿ ಕಾಪು ಪೊಲೀಸ್ ಠಾಣೆಯನ್ನು ವಿದ್ಯುತ್ ದೀಪಾಲಂಕಾರ ಹಾಗೂ ಹೂವುಗಳಿಂದ ಅಲಂಕರಿಸಿದ್ದು, ಠಾಣೆಯಲ್ಲಿನ ಆಯುಧಗಳಿಗೆ ಆಯುಧ ಪೂಜೆ ನೆರವೇರಿಸಲಾಗಿತ್ತು. ಈ ವೇಳೆ ಕಾಪು ಠಾಣೆಯ ಎಸ್‌ಐ ರಾಘವೇಂದ್ರ ಸೇರಿದಂತೆ ಅಲ್ಲಿನ ಎಲ್ಲ ಸಿಬ್ಬಂದಿ ಕೇಸರಿ ವಸ್ತ್ರಗಳನ್ನು ಧರಿಸಿ ಗ್ರೂಪ್ ಫೋಟೋ ತೆಗೆಸಿದ್ದರು.

ಇದೀಗ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಠಾಣೆಯಲ್ಲಿ ಆಯುಧ ಪೂಜೆ ಆಚರಿಸಿದಲ್ಲದೆ, ಸಂಘ ಪರಿವಾರದವರಂತೆ ಕೇಸರಿ ಬಟ್ಟೆ ಧರಿಸಿ ಫೋಟೋಗೆ ಫೋಸ್ ನೀಡಿರುವ ಬಗ್ಗೆ ವ್ಯಾಪಾಕ ಆಕ್ರೋಶ ವ್ಯಕ್ತ ವಾಗಿದೆ. ಈ ಫೋಟೋ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೂಡ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News