ತ್ರಿಶೂಲದ ಬದಲು ಪುಸ್ತಕ, ಪೆನ್ನು ಕೊಡಿ : ಅಮೃತ್ ಶೆಣೈ

Update: 2021-10-17 16:29 GMT

ಉಡುಪಿ, ಅ.17: ಯುವ ಜನತೆಯಲ್ಲಿ ಕಾನೂನಿನ ಅರಿವು ಮೂಡಿಸಿ ಅವರನ್ನು ಸುಶಿಕ್ಷಿತರನ್ನಾಗಿ ಮಾಡಿ ಭವಿಷ್ಯದ ಜವಾಬ್ದಾರಿ ಯುತ ಪ್ರಜೆಗಳನ್ನಾಗಿ ರೂಪಿಸುವುದನ್ನು ಬಿಟ್ಟು ಧರ್ಮ ರಕ್ಷಣೆ ನೆಪದಲ್ಲಿ ಅವರ ಕೈಯಲ್ಲಿ ಆಯುಧ ಗಳನ್ನು ನೀಡಿ, ಅವರ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿರುವುದು ಖೇದನೀಯ ಎಂದು ಉಡುಪಿ ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ ತಿಳಿಸಿದ್ದಾರೆ.

ದಯೆಯೇ ಧರ್ಮದ ಮೂಲ. ಯುವ ಜನರು ಧರ್ಮದ ಪಾಲನೆ ಮಾಡಿದರೆ ಧರ್ಮವನ್ನು ರಕ್ಷಿಸಿದ ಹಾಗೆ ಆಗುತ್ತದೆ. ಕರಾವಳಿಯಲ್ಲಿ ಶಾಂತಿ, ಅಹಿಂಸೆ ಹಾಗೂ ಪ್ರೀತಿಯನ್ನು ಎತ್ತಿ ಹಿಡಿಯಲು, ತನ್ಮೂಲಕ ಸಹೋದರತೆ ಹಾಗೂ ಸೌಹಾರ್ದತೆಯನ್ನು ಕಾಪಾಡಿಕೊ ಳ್ಳಲು ಸಹಬಾಳ್ವೆ ತಂಡದ ವತಿಯಿಂದ ಸಾಮರಸ್ಯ ನಡಿಗೆಯನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು. ಈ ಕಾರ್ಯ ಕ್ರಮಕ್ಕೆ ಎಲ್ಲಾ ಸಮಾನ ಮನಸ್ಕರ ಬೆಂಬಲ ಬೇಕು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News