×
Ad

ಮಂಗಳೂರು : ಎರಡು ದಶಕ ಪೂರೈಸಿದ ಎ.ಜೆ. ಆಸ್ಪತ್ರೆ

Update: 2021-10-18 11:13 IST

ಮಂಗಳೂರು: ಎ.ಜೆ. ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರವು ಒಂದು ಅತ್ಯಾಧುನಿಕ, ಸುಸಜ್ಜಿತ ಆಸ್ಪತ್ರೆ. 2001ರಲ್ಲಿ ಪ್ರಾರಂಭಗೊಂಡ, 425 ಹಾಸಿಗೆಗಳುಳ್ಳ ಈ ಆಸ್ಪತ್ರೆಯನ್ನು ವಿಶ್ವ ದರ್ಜೆಯ ಆರೋಗ್ಯ ಸೇವೆ ನೀಡಲು ಅಂತರಾಷ್ಟ್ರೀಯ ಮಾನದಂಡಗಳ ಪ್ರಕಾರ ವಿನ್ಯಾಸಗೊಳಿಸಲಾಗಿದೆ.

ಮಂಗಳೂರಿನಲ್ಲಿ NABH ಮಾನ್ಯತೆ ಪಡೆದ ಮೊದಲ ಆಸ್ಪತ್ರೆ, ಎ ಜೆ ಆಸ್ಪತ್ರೆಯು 30ಕ್ಕೂ ಹೆಚ್ಚು ಪ್ರಮುಖ ವೈದ್ಯಕೀಯ ವಿಭಾಗಗಳನ್ನು ಹೊಂದಿದ್ದು, ಉನ್ನತ ಮಟ್ಟದ ಆರೋಗ್ಯ ಸೇವೆಯನ್ನು ನೀಡಲು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ.

ಅತ್ಯಾಧುನಿಕ ಸೌಕರ್ಯಗಳು ಮತ್ತು ಸಲಕರಣೆಗಳನ್ನು ಹೊಂದಿರುವ ಎ.ಜೆ. ಆಸ್ಪತ್ರೆಯು, ಅನುಭವಿ ವೈದ್ಯರ ತಂಡದ ನೇತೃತ್ವದಲ್ಲಿದೆ ಹಾಗೂ ನುರಿತ ಪ್ರೊಫೆಶನಲ್ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಸಿಬ್ಬಂದಿಯಿಂದ ಬೆಂಬಲಿತವಾಗಿದೆ.  ಆಸ್ಪತ್ರೆಯು ಅತ್ಯಾಧುನಿಕ ಉಪಕರಣಗಳನ್ನು ಹೊಂದಿದೆ.  ಪ್ರಶಾಂತ ವಾತವರಣದಲ್ಲಿರುವ ಈ ಆಸ್ಪತ್ರೆಯು ರೋಗಿಯ ಅಗತ್ಯತೆಗಳು ಮತ್ತು ವೈದ್ಯಕೀಯ ಸೌಲಭ್ಯಗಳ ನಡುವೆ ಉತ್ತಮ ಹೊಂದಾಣಿಕೆಯನ್ನು ಒದಗಿಸುತ್ತದೆ, ಗುಣಮಟ್ಟದ ಆರೋಗ್ಯ ಸೇವೆಯನ್ನು ಕೈಗೆಟಕುವ ಬೆಲೆಯಲ್ಲಿ ನೀಡುತ್ತಿದೆ.  ಆಸ್ಪತ್ರೆಯು ಹ್ರದ್ರೋಗ, ಯುರೋಲಜಿ, ಕಾಸ್ಮೆಟಿಕ್, ಪುನರ್ನಿರ್ಮಾಣ ಮತ್ತು ಮೈಕ್ರೋವ್ಯಾಸ್ಕ್ಯುಲರ್  ಸರ್ಜರಿಗಳಲ್ಲಿ ಪ್ರಭಾವಶಾಲಿ ದಾಖಲೆಗಳನ್ನು ಸ್ಥಾಪಿಸಿದೆ.

ಎ.ಜೆ. ಕ್ಯಾನ್ಸರ್ ಸಂಸ್ಥೆಯು ಕೀಮೋಥೆರಪಿ, ರೇಡಿಯೆಶನ್ (ವಿಕಿರಣ), ಶಸ್ತ್ರಚಿಕಿತ್ಸೆ, ಹೆಮಾಟೊ-ಆಂಕೋಲಾಜಿ ಮತ್ತು ನೋವು ಶಮನಕಾರಿ ಚಿಕಿತ್ಸೆಯೊಂದಿಗೆ ಸಮಗ್ರ ಕ್ಯಾನ್ಸರ್ ಅರೈಕೆಯನ್ನು ಒದಗಿಸುತ್ತದೆ.  ಕ್ಯಾನ್ಸರ್ ವಿಭಾಗವು ಪೆಟ್-ಸಿಟಿ ಮತ್ತು ಅಯೋಡಿನ್ ಥೆರಪಿ ವಾರ್ಡ್ ನೊಂದಿಗೆ ಪರಿಪೂರ್ಣವಾಗಿದೆ.

ರೋಬೊಟಿಕ್ ಸಿಸ್ಟಮ್:  4ನೇ ತಲೆಮಾರಿನ ಡ ವಿನ್ಸಿ ಸಿಸ್ಟಮ್ಸ್ (USA) ಸಂಸ್ಥೆಯ ರೋಬೊಟ್ ಅನ್ನು ಎ.ಜೆ. ಆಸ್ಪತ್ರೆಯಲ್ಲಿ ಅಳವಡಿಸಲಾಗಿದ್ದು, ದೇಶದಲ್ಲಿಯೇ ಈ ಸೌಲಭ್ಯವನ್ನು ಹೊಂದಿರುವ 4ನೇ ಆಸ್ಪತ್ರೆಯಾಗಿದೆ. ರೋಬೊಟ್ ಶಸ್ತ್ರಚಿಕಿತ್ಸೆಯು ರೋಗಿ ಮತ್ತು ವೈದ್ಯರಿಬ್ಬರಿಗೂ ಲಾಭದಾಯಕ.   ರೋಬೊಟಿಕ್ ಸಿಸ್ಟಮ್ ಯುರೋಲಜಿ, ಗೈನಕಾಲಜಿ (ಸ್ರೀ ರೋಗ ಶಸ್ತ್ರ ಚಿಕಿತ್ಸೆ), ಜಠರ ಮತ್ತು ಕರುಳಿನ ಶಸ್ತ್ರಚಿಕಿತ್ಸೆ, ಕ್ಯಾನ್ಸರ್ ಶಸ್ತ್ರಚಿಕಿತ್ಸೆ, ಬೆರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಹಾಗೂ ಲ್ಯಾಪರೋಸ್ಕೋಪಿಕ್ ಶಸ್ತ್ರಚಿಕಿತ್ಸೆಗಳಲ್ಲಿ ಉಪಯೋಗವಾಗುತ್ತದೆ. ರೋಗಿಗಳು ಶಸ್ತ್ರಚಿಕಿತ್ಸೆಯಲ್ಲಿ ನಿಖರತೆ ಮತ್ತು  ಆಸ್ಪತ್ರೆಯ ಕಡಿಮೆ ವಾಸ್ತವ್ಯದ ಹೆಚ್ಚುವರಿ ಪ್ರಯೋಜನದೊಂದಿಗೆ ಬೇಗ ಚೇತರಿಸಿಕೊಳ್ಳುವುದರಿಂದ ಪ್ರಯೋಜನ ಪಡೆಯುತ್ತಾರೆ.

ಎ. ಜೆ. ಆಸ್ಪತ್ರೆಯು ಈ ಕೆಳಗಿನ ಎಲ್ಲಾ ಸೂಪರ್ ಸ್ಪೆಶಾಲಿಟಿ (ವಿಭಾಗ)ಗಳಾದ  ಹೃದಯರೋಗ, ಹೃದಯ ಶಸ್ತ್ರಚಿಕಿತ್ಸೆ, ಎಂಡೊಕ್ರೈನೊಲಜಿ, ಎಮರ್ಜೆನ್ಸಿ ಮೆಡಿಸಿನ್, ಗ್ಯಾಸ್ಟ್ರೋಎಂಟರೋಲಜಿ, ಹೆಮಟೊ ಒಂಕಾಲೊಜಿ, ಇಂಟರ್ವೆನ್ಶನಲ್ ರೆಡಿಯೋಲಜಿ, ಮೆಡಿಕಲ್ ಒಂಕಾಲೊಜಿ, ನೆಪ್ರೋಲಜಿ (ಕಿಡ್ನಿ/ಮೂತ್ರಪಿಂಡ ರೋಗ), ನ್ಯುರೋಲಜಿ (ನರರೋಗ), ನ್ಯುರೋಸರ್ಜರಿ (ನರರೋಗ ಶಸ್ತ್ರಚಿಕಿತ್ಸೆ), ನ್ಯುಕ್ಲಿಯರ್ ಮೆಡಿಸನ್, ಪೆಯಿನ್ ಆ್ಯಂಡ್ ಪಲ್ಲಿಯೆಟಿವ್ ಮೆಡಿಸನ್ (ನೋವು ಶಮನಕಾರಿ ಚಿಕಿತ್ಸೆ), ಮಕ್ಕಳ ಹೃದಯರೋಗ, ಮಕ್ಕಳ ಹೃದಯ ಶಸ್ತ್ರಚಿಕಿತ್ಸೆ, ಪ್ಲಾಸ್ಟಿಕ್ ಆ್ಯಂಡ್ ಮೈಕ್ರೋವ್ಯಾಸ್ಕ್ಯುಲರ್ ಶಸ್ತ್ರಚಿಕಿತ್ಸೆ, ರೇಡಿಯೇಶನ್ ಒಂಕೋಲಜಿ, ಸರ್ಜಿಕಲ್ ಒಂಕೋಲಜಿ, ಸರ್ಜಿಕಲ್ ಗ್ಯಾಸ್ಟ್ರೋಎಂಟರೊಲಜಿ (ಬೆರಿಯಟ್ರಿಕ್ ಸರ್ಜರಿ ಆ್ಯಂಡ್ ಲಿವರ್ ಟ್ರಾನ್ಸ್ ಪ್ಲಾಂಟ್), ಯುರೋಲಜಿ (ಮೂತ್ರರೋಗ), ಕಿಡ್ನಿ ಕಸಿ ಮತ್ತು ಸಾಮಾನ್ಯ ಸ್ಪೆಶಾಲಿಟಿಗಳಲ್ಲಿ (ಸಾಮಾನ್ಯ ವಿಭಾಗಗಳ) ಚಿಕಿತ್ಸೆಯನ್ನು ಪೂರೈಸುತ್ತದೆ.

''ಎ.ಜೆ. ಆಸ್ಪತ್ರೆಯು ತನ್ನ ವಿಶಾಲವಾದ ಕ್ಯಾಂಪಸ್ ನಲ್ಲಿರುವ ವಿಶ್ವದರ್ಜೆಯ ಸೌಲಭ್ಯಗಳು ಮತ್ತು ಸಮರ್ಪಿತ ಸಿಬ್ಬಂದಿ ಯೊಂದಿಗೆ, ರೋಗಿಗಳ ಸೇವೆಗೆ ಆಧ್ಯತೆಯನ್ನು ನೀಡುವ ಮೂಲಕ ಅತ್ಯುತ್ತಮ ಚಿಕಿತ್ಸೆಯನ್ನು ಒದಗಿಸುತ್ತಿದೆ''.

- ಡಾ. ಪ್ರಶಾಂತ್ ಮಾರ್ಲ ಕೆಎಂಎಸ್, (ಯುರೋಲಜಿ)
ವೈದ್ಯಕೀಯ ನಿರ್ದೇಶಕರು,  ಎಜೆ ಆಸ್ಪಿಟಲ್ ಆ್ಯಂಡ್ ರಿಸರ್ಚ್ ಸೆಂಟರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News