ಜಾಗತಿಕ ಹಸಿವು ಸೂಚ್ಯಂಕ: ಭಾರತ ಸರಕಾರದ ಆಕ್ಷೇಪಗಳನ್ನು ಅಲ್ಲಗಳೆದ ವರದಿ ಹೊರತಂದ ಸಂಸ್ಥೆಗಳು‌

Update: 2021-10-18 09:14 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಜಾಗತಿಕ ಹಸಿವು ಸೂಚ್ಯಂಕದಲ್ಲಿ 116  ದೇಶಗಳ ಪೈಕಿ ಭಾರತ 101ನೇ ಸ್ಥಾನದಲ್ಲಿದೆ ಹಾಗೂ ಗರಿಷ್ಠ ಹಸಿವಿನ ಸಮಸ್ಯೆ ಎದುರಿಸುತ್ತಿರುವ 16 ದೇಶಗಳ ಪೈಕಿ ಭಾರತ ಸೇರಿದೆ ಎಂದು ಜರ್ಮನಿಯ ಕನ್ಸರ್ನ್ ವರ್ಲ್ಡ್ ವೈಡ್ ಹಾಗೂ ವೆಲ್ತ್ ಹಂಗರ್ ಲೈಫ್ ಸಂಸ್ಥೆಗಳು ಇತ್ತೀಚೆಗೆ ಹೊರತಂದ ವರದಿಯ ವಿವರಗಳು ಭಾರತ ಸರಕಾರಕ್ಕೆ ಅಸಮಾಧಾನ ತಂದಿವೆ. ಭಾರತಕ್ಕೆ ಸಂಬಂಧಿಸಿದಂತೆ ಈ ವರದಿಯ ಅಂಕಿಅಂಶಗಳನ್ನು ಒಪ್ಪಲು ಸಿದ್ಧವಿಲ್ಲದ ಭಾರತದ ಸರಕಾರ ಈ ವರದಿಯನ್ನು ಸಮೀಕ್ಷೆಯೊಂದರ ಆಧಾರದಲ್ಲಿ ಹೊರತರಲಾಗಿದೆ ಎಂದು ಹೇಳಿರುವುದನ್ನು ವೆಲ್ತ್ ಹಂಗರ್ ಲೈಫ್ ಸಂಸ್ಥೆ ಅಲ್ಲಗಳೆದಿದೆ. 

ಸರಕಾರವು ಅಂಡರ್‌ ನರಿಶ್ಮೆಂಟ್ ಅಂದರೆ ಸಾಕಷ್ಟು ಪೌಷ್ಠಿಕಾಂಶಗಳು ಲಭ್ಯವಿಲ್ಲದೇ ಇರುವುದು ಹಾಗೂ ಅಂಡರ್ ನ್ಯೂಟ್ರಿಶನ್ - ಅಂದರೆ ತಿನ್ನುವ ಆಹಾರದ ಸಾಕಷ್ಟು ಪೌಷ್ಠಿಕಾಂಶಗಳು ಇಲ್ಲದೇ ಇರುವುದರ ನಡುವಿನ ವ್ಯತ್ಯಾಸವನ್ನು ಸರಿಯಾಗಿ ಅರ್ಥೈಸಿಲ್ಲ ಎಂದು ಸಂಸ್ಥೆ ಹೇಳಿದೆ.

ಈ ವರದಿಯನ್ನು ಹೊರತರಲು ಎರಡೂ ಸಂಸ್ಥೆಗಳು ನಾಲ್ಕು ಪ್ರಶ್ನೆಗಳ ಸಮೀಕ್ಷೆಗಳ ಆಧಾರದಲ್ಲಿ ಅವೈಜ್ಞಾನಿಕ ವಿಧಾನಗಳನ್ನು ಅನುಸರಿಸಿದ್ದವು ಎಂದು ಹೇಳಿದ ಸರಕಾರ ಈ ವಿಧಾನವನ್ನು ಪ್ರಶ್ನಿಸಿತ್ತು.

ಆದರೆ ಎರಡೂ ಸಂಸ್ಥೆಗಳು ತಾವು ಜಾಗತಿಕವಾಗಿ ಮಾನ್ಯತೆ ಪಡೆದ ಸೂಚ್ಯಂಕಗಳ ಆಧಾರದಲ್ಲಿಯೇ ಈ ವರದಿ ತಯಾರಿಸಿವೆ ಎಂದು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News