​ಉಪ್ಪಿನಂಗಡಿ ಸಿಟಿ ಸೆಂಟರ್‌ನ ವಿಶೇಷ ಕೂಪನ್ ಡ್ರಾ ಮುಂದೂಡಿಕೆ

Update: 2021-10-18 10:50 GMT

ಉಪ್ಪಿನಂಗಡಿ: ಇಲ್ಲಿನ ಸಿಟಿ ಸೆಂಟರ್‌ನಲ್ಲಿ 2 ಸಾವಿರ ರೂಪಾಯಿ ಖರೀದಿಗೆ ನೀಡಲಾಗಿದ್ದ "ಉಮ್ರಾ ಅಥವಾ ದುಬೈ" ಸಂದರ್ಶನದ ವಿಶೇಷ ಕೂಪನ್ ಡ್ರಾ ದಿನಾಂಕವನ್ನು ನ. 1ಕ್ಕೆ ಮುಂದೂಡಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಈ ಮೊದಲು ತಿಳಿಸಿದಂತೆ ಡ್ರಾ ದಿನಾಂಕ ಅ. 19 ಆಗಿದ್ದು, ಆದರೆ ಈ ದಿನ ಮೀಲಾದುನ್ನಬಿ ಸಲುವಾಗಿ ಸಂಸ್ಥೆಗೆ ರಜಾ ಇದ್ದುದರಿಂದಾಗಿ ಈ ಡ್ರಾವನ್ನು ನವೆಂಬರ್ 1ಕ್ಕೆ ಮುಂದೂಡಲಾಗಿದೆ. ಹಾಗೂ ಕರುವೇಲು ಜುಮಾ ಮಸೀದಿಯ ಖತೀಬ್ ಸೈಯ್ಯದ್ ಅನಸ್ ಹಾದಿ ತಂಙಳ್ ಡ್ರಾ ನಡೆಸಿ ಕೊಡಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News