ಕಿರು ಉದ್ದಿಮೆಗೆ 10 ಲಕ್ಷ ರೂ. ಸಹಾಯಧನ
Update: 2021-10-18 19:16 IST
ಮಂಗಳೂರು, ಅ.18: ಆತ್ಮನಿರ್ಭರ ಭಾರತ ಅಭಿಯಾನದ ಭಾಗವಾಗಿ ಪ್ರಧಾನಮಂತ್ರಿಗಳ ಕಿರುಆಹಾರ ಸಂಸ್ಕರಣಾ ಉದ್ದಿಮೆ ಗಳ ನಿಯಮ ಬದ್ಧಗೊಳಿಸುವಿಕೆ ಕಾರ್ಯಕ್ರಮದಡಿ ವೈಯಕ್ತಿಕ ಕಿರು ಉದ್ದಿಮೆಗಳಿಗೆ 10 ಲಕ್ಷ ರೂ. ಸಹಾಯಧನ ಪಡೆಯಲು ಅವಕಾಶವಿದೆ.
ಯೋಜನೆಯಡಿ ಮೀನಿನ ಖಾದ್ಯಗಳಾದ ಚಟ್ನಿ ಪುಡಿ, ಉಪ್ಪಿನಕಾಯಿ, ಚಕ್ಕುಲಿ, ಸೆಂಡಿಗೆ, ಚಿಪ್ಸ್, ರೋಟಿ, ಇತ್ಯಾದಿಗಳನ್ನು ತಯಾರಿಸುವುದು, ಮೀನನ್ನು ಭಾಗಗಳಾಗಿ ಮಾಡಿ ಫಿಲ್ಲೆಟ್ಸ, ಸ್ಟೀಕ್ಸ್ ಮಾದರಿಯಲ್ಲಿ ಶೀತಲೀಕರಿಸಿ, ಮಾರಾಟ ಮಾಡುವುದು, ಮೀನನ್ನು ಉಪ್ಪು ಹಾಕಿ ಅಥವಾ ಉಪ್ಪಿಲ್ಲದೇ ಆಧುನಿಕ ರೀತಿಯಲ್ಲಿ ಒಣಗಿಸುವುದು ಹಾಗೂ ಇವುಗಳನ್ನು ಆಕರ್ಷಕ ರೀತಿಯಲ್ಲಿ ಪ್ಯಾಕ್ ಮಾಡಿ, ಲೇಬಲ್ ಮಾಡಿ ಮಾರಾಟ ಮಾಡಬಹುದಾಗಿದೆ.
ಆಸಕ್ತರು ಜಿಪಂನ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟನೆಯಲ್ಲಿ ಕೋರಲಾಗಿದೆ.