ಸಮಾಜವಾದಿ ಪಕ್ಷದ ಬಂಡಾಯ ಶಾಸಕ ನಿತಿನ್ ಅಗರ್ವಾಲ್ ಉತ್ತರಪ್ರದೇಶ ಉಪಸಭಾಪತಿಯಾಗಿ ಆಯ್ಕೆ

Update: 2021-10-18 14:30 GMT
photo: Twitter/@nitinagarwal

ಲಕ್ನೊ: ಸಮಾಜವಾದಿ ಪಕ್ಷದ ಶಾಸಕ ನಿತಿನ್ ಅಗರ್ವಾಲ್ ಸೋಮವಾರ ಉತ್ತರ ಪ್ರದೇಶ ವಿಧಾನಸಭೆಯ ಉಪ ಸ್ಪೀಕರ್ ಆಗಿ ಆಯ್ಕೆಯಾದರು. ಅವರ ಉಮೇದುವಾರಿಕೆಯನ್ನು ಬಿಜೆಪಿ ಬೆಂಬಲಿಸಿದೆ. ಅಗರ್ವಾಲ್ ಅವರು ತಮ್ಮ ಪರವಾಗಿ 304 ಮತಗಳನ್ನು ಗಳಿಸಿದರೆ, ಎಸ್‌ಪಿ ಬೆಂಬಲಿತ ಅಭ್ಯರ್ಥಿ ನರೇಂದ್ರ ವರ್ಮಾ ಅವರು ಚಲಾವಣೆಯಾದ  364 ಮತಗಳಲ್ಲಿ 60 ಮತಗಳನ್ನು ಪಡೆದರು.

2019 ರಿಂದ ತಮ್ಮ ಪಕ್ಷದೊಂದಿಗೆ ಅಂತರ ಕಾಯ್ದುಕೊಳ್ಳುತ್ತಿರುವ ಹರ್ಡೋಯ್‌ನ ಸಮಾಜವಾದಿ ಪಕ್ಷದ ಬಂಡಾಯ ಶಾಸಕರಾದ ಅಗರ್ವಾಲ್ ಅವರು ರವಿವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ  ಅವರ ಸಚಿವರೊಂದಿಗೆ ನಾಮಪತ್ರ ಸಲ್ಲಿಸಿದ್ದರು. ಎಸ್ಪಿ ತನ್ನ ಸೀತಾಪುರದ ಶಾಸಕ ನರೇಂದ್ರ ವರ್ಮಾ ಅವರನ್ನು ಕಣಕ್ಕಿಳಿಸಿತು,

ಅಗರ್ವಾಲ್ ಅವರ ಉಮೇದುವಾರಿಕೆಯನ್ನು ಬಿಜೆಪಿ ಬೆಂಬಲಿಸಿದ ನಂತರ, ಎಸ್‌ಪಿ ಈ ಕ್ರಮವನ್ನು "ಅಪ್ರಜಾಸತ್ತಾತ್ಮಕ"  ಎಂದು ಕರೆದಿದೆ. ಸಾಮಾನ್ಯವಾಗಿ ಅತಿದೊಡ್ಡ ವಿರೋಧ ಪಕ್ಷದ ಶಾಸಕರು ಉಪಸಭಾಪತಿ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗುತ್ತಾರೆ ಎಂದು ವಾದಿಸಿದೆ. ಇದನ್ನು ನಿರಾಕರಿಸಿದ ಸಿಎಂ ಆದಿತ್ಯನಾಥ್, ಬಿಜೆಪಿ 'ಸಂಸದೀಯ ಸಂಪ್ರದಾಯಗಳನ್ನು' ಗೌರವಿಸುತ್ತದೆ ಹಾಗೂ  ಅದಕ್ಕಾಗಿಯೇ ಅತಿದೊಡ್ಡ ವಿರೋಧ ಪಕ್ಷದಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News