​ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು ಬದಲು ಪ್ರಕರಣ: ಡಿಎನ್‌ಎ ಪರೀಕ್ಷೆಗೆ ನ್ಯಾಯಾಲಯ ಅನುಮತಿ

Update: 2021-10-18 14:35 GMT
ಫೈಲ್ ಫೋಟೊ

ಮಂಗಳೂರು, ಅ.18: ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು ಬದಲು ಪ್ರಕರಣಕ್ಕೆ ಸಂಬಂಧಿಸಿದಂತೆ ಮಗು, ತಂದೆ ಹಾಗೂ ತಾಯಿಯ ಡಿಎನ್‌ಎ ಪರೀಕ್ಷೆಗೆ ನ್ಯಾಯಾಲಯ ಅನುಮತಿ ನೀಡಿದೆ.

ಮಗು ಅದಲು ಬದಲು ಆಗಿದೆ ಎಂದು ಆರೋಪಿಸಿ ಕುಂದಾಪುರ ನಿವಾಸಿ ಮುಸ್ತಾಫ ಎಂಬವರು ನೀಡಿದ ದೂರಿನ ಆಧಾರದಲ್ಲಿ ಬಂದರು ಪೊಲೀಸ್ ಠಾಣೆಯಲ್ಲಿ ಮಗು ಅಪಹರಣ ದೂರು ದಾಖಲಾಗಿತ್ತು.

ನ್ಯಾಯಾಲಯ ನೀಡಿದ ಸೂಚನೆ ಆಧಾರದಲ್ಲಿ ಅ.19ರಂದು ಮಗು ಹಾಗೂ ಪೋಷಕರ ಡಿಎಎನ್ ಪರೀಕ್ಷೆಯಾಗಲಿದೆ. ಬಳಿಕ ಇದರ ಸ್ಯಾಂಪಲ್‌ನ್ನು ಹೈದರಾಬಾದ್ ಅಥವಾ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಮೂರು ತಿಂಗಳೊಳಗೆ ಇದರ ವರದಿ ಬರಲಿದ್ದು, ಈ ವರದಿ ಆಧಾರದಲ್ಲಿ ಮುಂದಿನ ತನಿಖೆ ನಡೆಯಲಿದೆ ಎಂದು ಬಂದರು ಪೊಲೀಸರು ತಿಳಿಸಿದ್ದಾರೆ.

ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ಹೆರಿಗೆಯ ಸಂದರ್ಭ ಹೆಣ್ಣು ಮಗು ಎಂದು ದಾಖಲೆಯಲ್ಲಿ ನಮೂದಿಸಿ, ನಂತರ ಪೋಷಕರಿಗೆ ಗಂಡು ಮಗುವನ್ನು ನೀಡಿದ್ದು, ಇದರಿಂದ ಅನುಮಾನಗೊಂಡ ಪೋಷಕರು ನಗರದ ಬಂದರು ಪೊಲೀಸ್ ಠಾಣೆಗೆ ದೂರು ನೀಡಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News